ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರಥೋತ್ಸವ ಮುಕ್ತಾಯ

Rashmi Kasaragodu
Updated On : 20 Feb 2014, 2:36 am

ಮುಳಬಾಗಲು: ತಾಲೂಕಿನ ಮಂಡಿಕಲ್ ಗ್ರಾಮದ ಪ್ರಸನ್ನ ಚೌಡೇಶ್ವರಿ ರಥೋತ್ಸವದ ಭಾಗವಾದ ಅಗ್ನಿಕುಂಡ ಪ್ರವೇಶ ಮಂಗಳವಾರ ಬೆಳಿಗ್ಗೆ ನಡೆಯಿತು. ನೂರಾರು ಮಹಿಳೆಯರು ತಲೆಯ ಮೇಲೆ ತಂಬಿಟ್ಚು ದೀಪ ಹೊತ್ತು ಬೆಳಿಗ್ಗೆ 5 ಗಂಟೆ ವೇಳೆ ಅಗ್ನಿಕುಂಡದ ಪ್ರವೇಶ ಮಾಡಿದರು. ದೇವಾಲಯ ಧರ್ಮದರ್ಶಿ ಜಿ.ಆರ್.ನಾಗಭೂಷಣರಾವ್, ಕೆ. ಮಾಧವರಾವ್, ಜಿ.ಎನ್. ವೆಂಕಟಾಚಲಯ್ಯ, ವಿಜಯಮೋಹನ್, ಜಿ.ವಿ. ಪ್ರಹ್ಲಾದರಾವ್, ಮುಖ್ಯ ಅರ್ಚಕ  ನಟರಾಜ್ ಇದ್ದರು.
ಜಾತಿ ಪ್ರಮಾಣ ಪತ್ರ ನೀಡಲು ಒತ್ತಾಯ
ಮುಳಬಾಗಲು: ನದಾಫ್ ಪಿಂಜಾರ ಜನಾಂಗಕ್ಕೆ ಜಾತಿ ಪ್ರಮಾಣ ಪತ್ರ ನೀಡಲು ಅಧಿಕಾರಿಗಳು ನಿರಾಕರಿಸುತ್ತಿರುವುದರಿಂದ ತಾಲೂಕು ಆಡಳಿತ ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ಸಂಘದ ಅಧ್ಯಕ್ಷ ಕೆ.ಎಚ್. ಹುಸೇನ್ ಆಗ್ರಹಿಸಿದ್ದಾರೆ. ಪಟ್ಟಣದಲ್ಲಿ ಬುಧವಾರ ಸೇರಿದ್ದ ನದಾಫ್ ಪಿಂಜಾರ ಜನಾಂಗದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ನದಾಫ್ ಪಿಂಜಾರ ಹಿಂದುಳಿದ ವರ್ಗ ಪ್ರವರ್ಗ -1ರಲ್ಲಿ ಗುರ್ತಿಸಿದ್ದು ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.
ಪದಾಧಿಕಾರಿಗಳ ಆಯ್ಕೆ: ತಾಲೂಕು -ಪಿಂಜಾರ ಸಂಘದ ಅಧ್ಯಕ್ಷರಾಗಿ ಮಲ್ಲಕಚ್ಚನಹಳ್ಳಿ ಕೆ.ಎಚ್. ಹುಸೇನ್ ಸಾಬ್, ಉಪಾಧ್ಯಕ್ಷರಾಗಿ ಕೆ.ಎಸ್. ಮಸ್ತಾನ್ ಸಾಬ್, ಕಾರ್ಯದರ್ಶಿಯಾಗಿ ಹುಸೇನ್ ಸಾಬ್, ಸಹಕಾರ್ಯದರ್ಶಿಯಾಗಿ ಶಮೀಉಲ್ಲಾ, ಖಜಾಂಚಿಯಾಗಿ ಮುನ್ನಾ, ಜಿಲ್ಲಾ ಸದಸ್ಯರಾಗಿ ಎಸ್.ಕೆ. ಮೌಲ. ರಾಜ್ಯ ಸಂಘದ ಸದಸ್ಯರಾಗಿ ಬಾಬಾಜಾನ್, ಹೈದರವಲ್ಲಿರನ್ನು ಆಯ್ಕೆ ಮಾಡಲಾಯಿತು.
'ಅಭಿವೃದ್ಧಿಯಲ್ಲಿ ರಾಜಕೀಯ ಬೇಡ'
ಬಂಗಾರಪೇಟೆ: ಗ್ರಾಪಂಗಳನ್ನು ಮತ್ತಷ್ಟು ಸಬಲೀಕರಣಗೊಳಿಸಲು ಸರ್ಕಾರ ಪಂಚಾಯ್ತಿಗಳಿಗೇ ನೇರವಾಗಿ ಅನುದಾನ ಮಂಜೂರು ಮಾಡುತ್ತಿದ್ದು ಸದಸ್ಯರು ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡದೆ ಗ್ರಾಮಗಳ ಪ್ರಗತಿಗೆ ಮುಂದಾಗಬೇಕೆಂದು ಜಿಪಂ ಸದಸ್ಯ ಎಂ.ಎಸ್. ಆನಂದ್ ಹೇಳಿದರು. ಕಾರಹಳ್ಳಿ ಪಂಚಾಯ್ತಿ ವ್ಯಾಪ್ತಿ ಗ್ರಾಮಗಳಲ್ಲಿ 2013,14ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯ ಕ್ರಿಯಾಯೋಜನೆ ತಯಾರಿಸಲು, ಗ್ರಾಮಗಳಲ್ಲಿರುವ ನೈಜ ಸಮಸ್ಯೆಗಳನ್ನು ಅರಿಯಲು ಹಾಗೂ ನಿರ್ಮಲ ಭಾರತ ಅಭಿಯಾನ ಯೋಜನೆಗಳ ಅನುಷ್ಠಾನದ ಬಗ್ಗೆ ಗ್ರಾಮಸ್ಥರಿಗೆ ತಿಳುವಳಿಕೆ ಮೂಡಿಸಲು ಪಂಚಾಯ್ತಿ ಅಧ್ಯಕ್ಷರು ಸೇರಿದಂತೆ ಸದಸ್ಯರು ಹಮ್ಮಿಕೊಂಡಿದ್ದ ಗ್ರಾಮವಾರು ಸಭೆಯಲ್ಲಿ ಮಾತನಾಡಿದರು. ಸಭೆಯಲ್ಲಿ ತಾಪಂ ಸದಸ್ಯ ಹನುಮಪ್ಪ, ಶಾರದಶ್ರೀನಿವಾಸ್, ಅನುಸೂಯಮ್ಮ, ಪಿಡಿಒ ಸಂಧ್ಯಾ, ಕಾರ್ಯದರ್ಶಿ ಶ್ರೀರಾಮರೆಡ್ಡಿ, ಶಾಂತಿನಗರ ಮಂಜುನಾಥ್ ಇದ್ದರು.


ಶಿಕ್ಷಕರ ಹುದ್ದೆ ಭರ್ತಿಗೆ ಆಗ್ರಹಿಸಿ ಪ್ರತಿಭಟನೆ


ಚಿಕ್ಕಬಳ್ಳಾಪುರ: ಅನೇಕ ವರ್ಷಗಳಿಂದ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಡಿವೈಎಫ್ಐ ಸಂಘಟನೆ ಒತ್ತಾಯಿಸಿದೆ.
ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಮುಂದೆ ಧರಣಿ ನಡೆಸಿ ಘೋಷಣೆ ಕೂಗಿದ ಡಿವೈಎಫ್ಐ ಕಾರ್ಯಕರ್ತರು ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕೆಂದು ಒತ್ತಾಯಿಸಿದರು.
ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಶಿವಪ್ಪ ಮಾತನಾಡಿ, ಪೋಷಕರು ಸರ್ಕಾರಿ ಶಾಲೆಗಳನ್ನು ಕೀಳರಿಮೆಯಿಂದ ನೋಡುತ್ತ ಖಾಸಗೀ ಶಾಲೆಗಳ ವಾಲುತ್ತಿದ್ದಾರೆ. ಅದೇ ರೀತಿ ಖಾಸಗೀ ಶಾಲೆಗಳು ಪೋಷಕರನ್ನು ಸೆಳೆಯುವ ನಿಟ್ಟಿನಲ್ಲಿ ಸೌಲಭ್ಯಗಳನ್ನು ಹೆಚ್ಚಿಸಿಕೊಳ್ಳುತ್ತಿವೆ. ಆದರೆ, ಸರ್ಕಾರ ಸರ್ಕಾರಿ ಶಾಲೆಗಳಲ್ಲಿನ ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಟೀಕಿಸಿದರು. ಧರಣಿಯಲ್ಲಿ ಡಿವೈಎಫ್ಐ ಸಂಘಟನೆಯ ರಾಮು, ಶ್ರೀನಿವಾಸ್ ಯಾದವ್, ರಾಜು ಇದ್ದರು.




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement