ಹಾಡ ಹಗಲೆ # 9 ಲಕ್ಷ ದರೋಡೆ
ಕೋಲಾರ: ನಗರದ ಬ್ರಾಹ್ಮಣರ ಬೀದಿಯ ರವಿ ಎಂಟರ್ ಪ್ರೈಸಸ್ ಬಳಿ ಬುಧವಾರ ಮಧ್ಯಾಹ್ನ 2.30ರ ಸಮಯದಲ್ಲಿ ಬ್ಯಾಂಕಿಗೆ ಕೊಂಡೊಯ್ಯುತ್ತಿದ್ದ ಹಣವನ್ನು ಇಬ್ಬರು ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದಾರೆ.
ಇತ್ತೀಚೆಗೆ ಮಹಿಳೆಯರ ಕತ್ತಿನಿಂದ ಚಿನ್ನದ ಸರ ಕಸಿದು ಹೋಗುತ್ತಿರುವ ಘಟನೆಗಳಿಂದ ತಲ್ಲಣಗೊಂಡಿರುವ ನಗರದ ಜನತೆ ಹಾಡು ಹಾಗಲೇ ಹಣವನ್ನು ದರೋಡೆ ಮಾಡಿರುವುದು ಮತ್ತಷ್ಟು ಆತಂಕಕ್ಕೆ ಎಡೆ ಮಾಡಿದೆ. ಬಾಬು ಮೌನಿ ಎಂಬುವರ ಬಳಿ ಕೆಲಸ ಮಾಡುತ್ತಿರುವ ನಾಗರಾಜ್ ಎಂಬುವರು 9 ಲಕ್ಷ ರು.ಗಳನ್ನು ಬ್ಯಾಂಕ್ ಆಫ್ ಬರೋಡಾಕ್ಕೆ ಜಮಾ ಮಾಡಲು ಬೈಕ್ನಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ನಾಗರಾಜ್ ಬೈಕ್ ಹಿಂಬಾಲಿಸಿ ಬಂದ ಇಬ್ಬರು ದುಷ್ಕರ್ಮಿಗಳು ಬೈಕ್ ಹಿಂದೆ ನೋಟುಗಳು ಬಿದ್ದಿದೆ ಎಂದು ನಾಗರಾಜ್ ಅವರ ಗಮನ ಬೇರೆಡೆ ಸೆಳೆದು 9 ಲಕ್ಷ ರು.ನಗದು ದೋಚಿ ಪರಾರಿಯಾಗಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಮೀಲ್, ಸಿಪಿಐ ಶಿವಕುಮಾರ್, ಪಿಎಸ್ಐ ಸುಧಾಕರರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು.
ತಹಸೀಲ್ದಾರ್ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ರೌಡಿ
ಬಾಗೇಪಲ್ಲಿ: ಅವಮಾನವಾಗಿದೆ ಎಂದು ರೌಡಿ ಶೀಟರ್ ಒಬ್ಬ ತಹಸೀಲ್ದಾರ್ ಮುಂದೆಯೇ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಕ್ರಿಕೆಟ್ ಮೂರ್ತಿ (25) ಎಂಬವನೇ ನಿದ್ರೆ ಮಾತ್ರೆ ಸೇವೆನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ. ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ವಿವಿಧ ರೀತಿಯ ಅಪರಾಧಗಳಲ್ಲಿ ಭಾಗಿಯಾಗಿರುವ ರೌಡಿಗಳನ್ನು ಬಂಧಿಸಿ ತಹಸೀಲ್ದಾರ್ ಮುಂದೆ ಹಾಜರುಪಡಿಸಲು ಪೊಲೀಸರು ಮಂಗಳವಾರ 7 ಮಂದಿ ಹಾಗೂ ಬುಧವಾರ 10 ಸೇರಿದಂತೆ ಒಟ್ಟು 17 ಮಂದಿ ರೌಡಿ ಶೀಟರ್ಗಳನ್ನು ಬಂಧಿಸಿ ತಹಸೀಲ್ದಾರ್ ಮುಂದೆ ಹಾಜರುಪಡಿಸಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಕ್ರಿಕೆಟ್ ಮೂರ್ತಿ ತಹಸೀಲ್ದಾರ್ ಮುಂದೆಯೇ ಸುಮಾರು 20 ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡಿದ್ದಾನೆ. ವಿಷಯ ತಿಳಿದ ತಕ್ಷಣ ತಹಸೀಲ್ದಾರ್ ಮತ್ತು ಪೊಲೀಸರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.