ಕೆಜಿಎಫ್: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
ಕೆಜಿಎಫ್: ಗೋಡೆ ನಿರ್ಮಿಸುವ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರ ಮೇಲೆ ರಾಡ್ನಿಂದ ಹಲ್ಲೆ ಮಾಡಿರುವ ಘಟನೆ ಚಾಂಪಿಯನ್ರೀಫ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಡಿ. ಬ್ಲಾಕ್ ನಿವಾಸಿ ಚಂದ್ರಕುಮಾರ್ ಮನೆಗೆ ಸೇರಿದಂತೆ ಪಕ್ಕದ ಮನೆ ನಿವಾಸಿ ಸುಬ್ರಮಣಿ ಎಂಬುವರು ಗೋಡೆ ತೆರವುಗೊಳಿಸಲು ಮುಂದಾದಾಗ ಪ್ರನೀಶ್ ಮಣಿ ಹಾಗೂ ಅವರ ಮಾವ ವಿಕ್ಟರ್ ಎಂಬವರು ತಡೆದು ಚಂದ್ರಕುಮಾರ್ನನ್ನು ಅವಾಚ್ಯಶಬ್ದಗಳಿಂದ ನಿಂದಿಸಿ ರಾಡ್ನಿಂದ ತಲೆಯ ಮೇಲೆ ಹೊಡೆದು ಹಲ್ಲೆ ಮಾಡಿದ್ದಾರೆ ಎಂದು ಚಂದ್ರಕುಮಾರ್ ಚಾಂಪಿಯನ್ರೀಫ್ ಠಾಣೆಯಲ್ಲಿ ದೂರು ನೀಡಿದ್ದಾರೆ.