ವೇತನ ಬಿಡುಗಡೆಗೆ ಆಗ್ರಹಿಸಿ ಮನವಿ
ಮಾಲೂರು: ವೇತನ ಶೀಘ್ರ ಬಿಡುಗಡೆ ಮಾಡಬೇಕೆಂದು ಅಗ್ರಹಿಸಿ ಸ್ಥಳೀಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕಾರ್ಯನಿರ್ವಹಣಾಧಿಕಾರಿಗಳನ್ನು ಗುರುವಾರ ಭೇಟಿ ಮಾಡಿ ಮನವಿ ಸಲ್ಲಿಸಿತು.
ಈ ಸಂಧರ್ಭಧಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮುನಿನಾರಾಯಣ್, ತಾಲೂಕಿನ ಶಿವಾರ ಪಟ್ಟಣ, ಹುಳದೇನಹಳ್ಳಿ ಸೇರಿದಂತೆ ಮಾಲೂರು ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಫೆ.20 ಆದರೂ ಜನವರಿ ತಿಂಗಳ ವೇತನವಾಗಿಲ್ಲ. ಫೆಬ್ರವರಿ ತಿಂಗಳ ವೇತನವು ನಿಧಾನವಾದರೆ ಸಂಬಂಧ ಪಟ್ಟ ಕಚೇರಿ ಮುಂದೆ ಧರಣಿ ಮಾಡುವುದಾಗಿ ಎಚ್ಚರಿಸಿದರು. ಗೌರವಾಧ್ಯಕ್ಷ ಅಶ್ವಥ್ನಾರಾಯಣ ಗೌಡ ಮಾತನಾಡಿದರು. ಮನವಿ ಸ್ವೀಕರಿಸಿ ಮಾತನಾಡಿದ ಇಒ ಸಂಜೀವಪ್ಪ, ಬಿಡುಗಡೆಯಾಗಿದ್ದ ಜನವರಿ ತಿಂಗಳ ವೇತನ ಬಾಕಿ ಉಳಿದಿದ್ದ 15 ದಿನಗಳ ಗಳಿಕೆ ಹಣ ನಗದೀಕರಣಕ್ಕಾಗಿ ಶಿಕ್ಷಣ ಇಲಾಖೆ ಉಪಯೋಗಿಸಿಕೊಂಡಿದೆ. ಇವೆಲ್ಲವು ಡಿಡಿಪಿಐ ನೀಡಿರುವ ಅಲಾಟ್ಮೆಂಟ್ನಂತೆ ನೀಡಲಾಗಿದೆ. ಶಿಕ್ಷಕರ ವೇತನ ಸಮಸ್ಯೆ ತೀರಬೇಕಾದರೆ ಜಿಪಂನಲ್ಲಿ ಮಾತನಾಡಬೇಕಾಗುತ್ತದೆ ಎಂದರು. ಸ್ಥಳದಲ್ಲಿದ್ದ ಜಿಪಂ ಸದಸ್ಯ ರಾಮಸ್ವಾಮಿ ರೆಡ್ಡಿ, ಮಾಲೂರು ತಾಲೂಕಿನ ಶಿಕ್ಷಕರ ಸಮಸ್ಯೆ ಬಗ್ಗೆ ಜಿಪಂ ಅಧ್ಯಕ್ಷರೊಡನೆ ಚರ್ಚಿಸಿ ಬಗೆ ಹರಿಸಲಾಗುವುದು ಎಂದರು. ಉಪಾಧ್ಯಕ್ಷ ಎ.ಕೆ. ವೆಂಕಟೇಶ್, ಕಾರ್ಯದರ್ಶಿ ಎ.ಎಂ. ರವಿ, ಗುಂಡಪ್ಪ, ಜಿ. ಮುನಿಯಪ್ಪ, ಎಚ್. ಸುರೇಶ್, ರಾಧ ರುಕ್ಮುಣಿ, ರಾಜೇಶ್ವರಿ, ಪ್ರೇಮಕುಮಾರಿ, ಚಂದ್ರಪ್ಪ ಇದ್ದರು.
ತಾಪಂ ಕಚೇರಿಯಲ್ಲಿ ವಿಶೇಷ ಪೂಜೆ
ಮಾಲೂರು: ನನ್ನ ಅಧಿಕಾರಾವಾಧಿಯಲ್ಲಿ ಜನಪರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸಹ ಸದಸ್ಯರ ಸಹಕಾರದಲ್ಲಿ 6 ತಿಂಗಳ ನನ್ನ ಆಡಳಿತ ನನಗೆ ತೃಪ್ತಿ ನೀಡಿದೆ ಎಂದು ತಾಪಂ ಅಧ್ಯಕ್ಷ ಪುಟ್ಟಸ್ವಾಮಿ ಹೇಳಿದರು.
ನವೀಕರಣಗೊಂಡಿರುವ ತಾಪಂ ಕಚೇರಿಯಲ್ಲಿ ಆಯೋಜಿಸಿಗಿದ್ದ ವಿಶೇಷ ಪೂಜೆ ನಂತರ ಮಾತನಾಡಿ, ಕಳದೆ 10 ರಂದು ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರ ಆದೇಶ ಮತ್ತು ಅಂತರಿಕ ಒಪ್ಪಂದದಂತೆ ರಾಜಿನಾಮೆ ನೀಡಿದ್ದು, ಅಧ್ಯಕ್ಷರಾಗಲು ಅವಕಾಶ ಮಾಡಿಕೊಟ್ಟ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಮತ್ತಿತರರಿಗೆ ಕೃತಜ್ಞತೆ ಸಲ್ಲಿಸಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಸಂಜೀವಪ್ಪ, ಮಾಜಿ ಅಧ್ಯಕ್ಷ ಗೋಪಾಲ್ಗೌಡ, ಚಂದ್ರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಪ್ಪ, ಸದಸ್ಯರಾದ ಎಸ್.ವಿ. ಲೋಕೇಶ್, ರಾಧಮ್ಮ,ಅಮರಾವತಿ, ಚಂದ್ರ, ಆಂಜಿನಪ್ಪ ಇದ್ದರು.