ಶಿಡ್ಲಘಟ್ಟದಲ್ಲಿ ವ್ಯಕ್ತಿ ಅನುಮಾನಾಸ್ಪದ ಸಾವು
ಶಿಡ್ಲಘಟ್ಟ: ಪಟ್ಟಣದ ಹೊರವಲಯದ ಇದ್ಲೂಡಿನಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾದ ಪ್ರಕರಣ ನಡೆದಿದೆ. ನವೀನ್(20) ಮೃನೆಂದು ಗುರ್ತಿಸಲಾಗಿದೆ. ಇದ್ಲೂಡಿನ ನಿವಾಸಿ ಕೃಷ್ಣಪ್ಪ ಮತ್ತು ಚಂದ್ರಮ್ಮ ದಂಪತಿಗಳ ಮಗನಾದ ನವೀನ್ ಭಾನುವಾರ ಮನೆಯಿಂದ ಹೋದವನು ಶವವಾಗಿ ಕಂಡುಬಂದಿದ್ದಾನೆ. ಕೊಲೆಗಡುಕರನ್ನು ಬಂಧಿಸುವವರೆಗೂ ಶವ ಪಡೆಯುವುದಿಲ್ಲವೆಂದು ಸಂಬಂಧಿಕರು ಮತ್ತು ಇದ್ಲೂಡು ಗ್ರಾಮಸ್ಥರು ಪೊಲೀಸರ ಮೇಲೆ ಒತ್ತಡ ಹೇರಿದರು. ದೂರು ದಾಖಲಿಸಿಕೊಂಡಿದ್ದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದರು.