ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಆರೋಗ್ಯಕ್ಕೆ ಆಯುರ್ವೇದ ಸಂಜೀವಿನಿ'

Rashmi Kasaragodu
Updated On : 22 Feb 2014, 2:10 am

ಗುಡಿಬಂಡೆ: ಪ್ರಾಚೀನ ಕಾಲದ ಆಯುರ್ವೇದ ಪದ್ಧತಿಯಿಂದ ಮನುಷ್ಯ ಉತ್ತಮ ಆರೋಗ್ಯಕಾಪಾಡಿಕೊಳ್ಳಬಹುದು ಎಂದು ಶಿರಸಿ ಮೂಲದ ನಿಸರ್ಗ ಸಂಸ್ಥೆಯ ಅಧ್ಯಕ್ಷ ಡಾ. ವೆಂಕಟರಮಣ ಹೆಗಡೆ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಪಂ, ಚಿಕ್ಕಬಳ್ಳಾಪುರದ ಆಯುಷ್ ಇಲಾಖೆ ಮತ್ತು ಶಿರಸಿಯ ನಿಸರ್ಗ ಸಂಸ್ಥೆ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ಆಯುಷ್ ಸೆಮಿನಾರ್ನಲ್ಲಿ ಮಾತನಾಡಿ, ವಿದೇಶಿ ಮೂಲದ ಅಲೋಪತಿ ಚಿಕಿತ್ಸೆಯಲ್ಲಿ ಆಧುನಿಕ ಶಸ್ತ್ರ ಚಿಕಿತ್ಸೆಗಳಿದ್ದರೂ ಅನೇಕ ಕಾಯಿಲೆಗಳಿಗೆ ಆಯುರ್ವೇದ ಚಿಕಿತ್ಸೆಯೇ ಉಪಕಾರಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ. ಸನಾವುಲ್ಲಾ, ಮಾನವನ ದೇಹಕ್ಕೆ ಕಾಯಿಲೆ ಬಂದಾಗ ಚಿಕಿತ್ಸೆ ಪಡೆಯುವುದಕ್ಕಿಂತ, ಕಾಯಿಲೆ ಬರದಂತೆ ಜಾಗೃತಿ ವಹಿಸುವುದೇ ಆಯುಷ್ ವೈದ್ಯ ಪದ್ಧತಿಯ ಗುಣವಾಗಿದ್ದು, ಯಾವುದೇ ಅಡ್ಡಪರಿಣಾಮಗಳಿಲ್ಲದ ಪ್ರಾಕೃತಿಕ ಮೂಲದಿಂದ ತಯಾರಿಸಿದ ಔಷಧಗಳಿಂದ ರೋಗ ನಿವಾರಣೆ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ನೆರೆದಿದ್ದ ಆಶಾಕಾರ್ಯಕರ್ತೆಯರಿಗೆ ಹಾಗೂ ಸಾರ್ವಜನಿಕರಿಗೆ ಆಯುಷ್ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಹಾಗೂ ಮನೆಯಲ್ಲಿಯೇ ಔಷಧ ತಯಾರಿಸುವ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಯುವ ವಿಜ್ಞಾನಿ ಡಾ.ಪ್ರವೀಣ್ ಜೇಖಬ್ ತಿಳಿಸಿಕೊಟ್ಟರು. ತಾಪಂ ಅಧ್ಯಕ್ಷೆ ಆನಂದಮ್ಮ, ಸಾರ್ವಜನಿಕ ಆಸ್ಪತ್ರೆ ನೇತ್ರ ತಜ್ಞ ಪುಷ್ಪರಾಜ್, ಸೋಮೇನಹಳ್ಳಿ ಆಯುಷ್ ಆಸ್ಪೆತ್ರೆಯ ವೈದ್ಯ ಡಾ. ಗೋಮತಿ ಮತ್ತು ಡಾ. ಕುದ್ಸಿಯಾ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement