ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ದುಶ್ಚಟಗಳ ದಾಸರಾಗದೆ ಉತ್ತಮ ಪ್ರಜೆಗಳಾಗಿ'

Rashmi Kasaragodu
Updated On : 22 Feb 2014, 2:09 am

ಕೋಲಾರ: ಕುಡಿತದಿಂದ ಮನುಷ್ಯನಿಗೆ ಹಲವಾರು ದುಷ್ಪರಿಣಾಮಗಳು ಉಂಟಾಗಿ ಪ್ರಾಣ ಕಳೆದು ಕೊಳ್ಳಬೇಕಾಗುವುದರಿಂದ ಮದ್ಯಪಾನ ಮಾಡಬಾರದೆಂದು ರಮಾ ಮಾಧವ ಪ್ರೌಢಶಾಲೆಯ ಹಿರಿಯ ಕನ್ನಡ ಉಪನ್ಯಾಸಕ ವೆಂಕಟರಮಣಪ್ಪ ತಿಳಿಸಿದರು.
ಅವರು ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಹಾಗೂ ವಾರ್ತಾ ಇಲಾಖೆ ವತಿಯಿಂದ ಮಾಲೂರು ತಾಲೂಕಿನ ಹುಳದೇನಹಳ್ಳಿ ರಮಾ ಮಾದವ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಮದ್ಯಪಾನದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮದ್ಯಪಾನದಲ್ಲಿ ವಿಷಕಾರಿಕ ವಸ್ತುಗಳು ಇರುತ್ತವೆ. ಇದನ್ನು ಕುಡಿಯುವುದರಿಂದ ಅಂಗಾಗಳು ನಾಶವಾಗುತ್ತವೆ, ಯುವಕರು ಮದ್ಯಪಾನಕ್ಕೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಕುಡಿತದ ಚಟಕ್ಕೆ ಬಲಿಯಾದರೆ ಸಮಾಜದಲ್ಲಿ ಬೆಲೆಯನ್ನು ಕಳೆದುಕೊಳ್ಳುತ್ತಾರೆಂದರು.
ಹೆಣ್ಣು ಮಕ್ಕಳು ಸಹಾ ಕುಡಿತದಿಂದ ದೂರವಿರಬೇಕು. ಕುಡಿತಕ್ಕೆ ಬಲಿಯಾದವರ ಮನಪರಿವರ್ತನೆ ಮಾಡಬೇಕು. ವಿದ್ಯಾರ್ಥಿಗಳು ಮದ್ಯಪಾನ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕೆಂದರು.
ಶಾಲಾ ಆಡಳಿತ ಮಂಡಳಿ ನಿರ್ದೇಶಕ ರಾಜಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಶಿಕ್ಷಕ ಕೆ.ಬಿ. ರಾಜು ಮದ್ಯಪಾನದಿಂದ ಆಗುವ ಸಮಸ್ಯೆಗಳನ್ನು ತಿಳಿಸಿದರು.
ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ಉತ್ತಮವಾಗಿ ಮಾತನಾಡಿದ ಒಂಬತ್ತನೇ ತರಗತಿ ಪ್ರವೀಣ್ಗೆ ಪ್ರಥಮ ಬಹುಮಾನ, ಹತ್ತನೇ ತರಗತಿಯ ಪವನ್ಕುಮಾರ್ಗೆ ದ್ವಿತೀಯ ಬಹುಮಾನ, 9ನೇ ತರಗತಿ ಅರ್ಬಜ್ಗೆ ತೃತೀಯ ಬಹುಮಾನವನ್ನು ಮುಖ್ಯೋಪಾಧ್ಯಾಯ ಅಮರನಾಥ್ ವಿತರಿಸಿದರು.
ಉಪನ್ಯಾಸಕರಾದ ಸ್ವಾಮಿ, ಮಂಜುನಾಥ್ ಇದ್ದರು, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸಿ.ಎಂ. ರಂಗಾರೆಡ್ಡಿ ಸ್ವಾಗತಿಸಿ, ಚಲನಚಿತ್ರ ನಿರ್ವಾಹಕ ನಟರಾಜ ಚಾರಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement