ನವಗ್ರಹ ಪ್ರತಿಷ್ಠಾಪನೆ
ಶಿಡ್ಲಘಟ್ಟ: ಪಟ್ಟಣದ ಇದ್ಲೂಡು ರಸ್ತೆಯ ಮುನಿಕ್ಷೇತ್ರ ಮುಕ್ತಿಧಾಮದ ಶನೈಶ್ಚರಸ್ವಾಮಿ ಹಾಗೂ ಮುನೇಶ್ವರಸ್ವಾಮಿ ದೇವಾಲಯದಲ್ಲಿ ಶನೈಶ್ಚರ, ಗಣಪತಿ, ಆಂಜನೇಯಸ್ವಾಮಿ ಸಮೇತ ನವಗ್ರಹಗಳ ನೂತನ ವಿಗ್ರಹಗಳ ಪ್ರಾಣಪ್ರತಿಷ್ಠಾಪನಾ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಶನೈಶ್ಚರ ಹಾಗೂ ಮುನೇಶ್ವರ ದೇವಾಲಯದ ಆವರಣದಲ್ಲಿ ಗುರುವಾರ ಗಣಪತಿ, ಅಭಯ ಆಂಜನೇಯಸ್ವಾಮಿ, ನವಗ್ರಹಗಳ ನೂತನ ಶಿಲಾಬಿಂಬ ಪ್ರತಿಷ್ಠಾಪನೆ ಹಾಗೂ ವಿಮಾನಗೋಪುರ, ಕಳಶ ಪ್ರತಿಷ್ಠಾಪನೆ, ಧ್ವಜಸ್ತಂಭ ಕುಂಬಾಭಿಷೇಕ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು. ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆ ನಡೆಯಿತು.