ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನೆನೆಗುದಿಗೆ ಬಿದ್ದಿದ್ದ ಸಮುದಾಯ ಭವನ ಲೋಕಾರ್ಪಣೆ

Rashmi Kasaragodu
Updated On : 22 Feb 2014, 2:10 am

ಬಂಗಾರಪೇಟೆ: ಕಳೆದ ಎರಡು ದಶಕಗಳಿಂದ ಉದ್ಘಾಟನೆಯ ಭಾಗ್ಯ ಕಾಣದೆ ನೆನೆಗುದಿಗೆ ಬಿದ್ದಿದ್ದ ರಾಜೀವ್ ಗಾಂಧಿ ಸಮುದಾಯ ಭವನವನ್ನು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅಡೆತಡೆಗಳನ್ನು ನಿವಾರಿಸಿ ಶುಕ್ರವಾರ ಲೋಕಾರ್ಪಣೆ ಮಾಡಿದರು.
ಕಳೆದ ಹತ್ತು ವರ್ಷಗಳಿಂದ ಐಡಿಎಸ್ಎಂಟಿ ಯೋಜನೆಯಲ್ಲಿ ಸುಮಾರು 69ಲಕ್ಷ ರು.ಗಳಲ್ಲಿ ಬಡವರಿಗೆ ಅನುಕೂಲವಾಗಲೆಂದು ಪುರಸಭೆವತಿಯಿಂದ ಈ ಸಮುದಾಯಭವನವನ್ನು ಪ್ರಾರಂಭಿಸಿದರು. ನಂತರ ಆರ್ಥಿಕ ಮುಗ್ಗಟ್ಟಿನಿಂದ ಕಾಮಗಾರಿ ಆಮೆ ನಡಿಗೆಯಲ್ಲಿ ಸಾಗಿತ್ತು. ಕಳೆದ ವರ್ಷ ಭವನ ಪೂರ್ಣವಾಗಿದ್ದರೂ ಕಟ್ಟಡ ಕಾಮಗಾರಿಯ ಗುತ್ತಿಗೆ ಪಡೆದಿದ್ದ ಭೂಸೇನ ನಿಗಮಕ್ಕೆ ಬಾಕಿ ಹಣವನ್ನು ಪುರಸಭೆ ನೀಡಿಲ್ಲದ ಕಾರಣ ಅವರು ಉದ್ಘಾಟನೆಗೆ ಬೀಗ ಹಸ್ತಾಂತರಿಸದೆ ಬೀಗ ಜಡಿಯಲಾಗಿತ್ತು. ಶಾಸಕ ಎಸ್.ಎನ್. ನಾರಾಯಣಸ್ವಾಮಿ ಶಾಸಕರಾದ ಬಳಿಕ ಭವನ ಉದ್ಘಾಟನೆಗೆ ಇದ್ದ ಎಲ್ಲಾ ಅಡೆತಡೆಗಳಿಗೆ ಮೋಕ್ಷ ಕಲ್ಪಿಸಿ ಶುಕ್ರವಾರ ಭವನವನ್ನು ಲೋಕಾರ್ಪಣೆ ಮಾಡಿದರು. ಸಭೆಯಲ್ಲಿ ಪುರಸಭೆ ಸದಸ್ಯರಾದ ಅಣ್ಣಾದೊರೆ, ಆರೋಕ್ಯರಾಜಣ್, ಶಫಿ, ರಮೇಶ್, ಭಾಗ್ಯಮ್ಮ, ಅಸ್ಲಂಪಾಷ, ರಂಗರಾಮಯ್ಯ, ಭೂಸೇನೆ ಎಂಜಿನಿಯರ್ ವಿಜಯಕುಮಾರ್, ಮುಖ್ಯಾಧಿಕಾರಿ ಜಹೀರ್ ಅಬ್ಬಾಸ್, ಶಶಿಕುಮಾರ್, ಶ್ರೀನಿವಾಸಮೂರ್ತಿ ಇದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement