ಮಕ್ಕಳು ಉನ್ನತ ವ್ಯಾಸಂಗ ಮಾಡಿ'
ಟೇಕಲ್: ಗ್ರಾಮೀಣ ಮಕ್ಕಳು ಉನ್ನತ ವ್ಯಾಸಂಗ ಮಾಡಿ ಉತ್ತಮ ಪ್ರಜೆಗಳಾಗಬೇಕೆಂದು ತಾಪಂ ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡ ಕರೆ ನೀಡಿದರು.
ಹುಳದೇನಹಳ್ಳಿ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ರಮಾಮಾಧವ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸರ್ಕಾರದ ಉಚಿತ ಸೈಕಲ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಕರು ಗುಣಮಟ್ಟದ ಶಿಕ್ಷಣ ಹಾಗೂ ಪ್ರೋತ್ಸಾಹ ನೀಡಬೇಕು ಎಂದರು. ಎಚ್.ವಿ. ಚಂದ್ರಶೇಖರಗೌಡ, ವಿ.ಎಸ್. ಕೃಷ್ಣಪ್ಪ, ಚಲಪತಿ, ತಿಮ್ಮನಾಯಕನಹಳ್ಳಿ ಶಿವಾಜಿರಾವ್, ವೆಂಕಟೇಶಪ್ಪ, ಕೃಷ್ಣಮೂರ್ತಿ, ದೊಡ್ಡವೀರಯ್ಯ, ಅಣ್ಣಯ್ಯಪ್ಪ, ಆನಂದ್, ಶ್ರೀನಿವಾಸ್, ವೆಂಕಟೇಶ್, ಶಿವಕುಮಾರ್, ಚಂದ್ರಶೇಖರ್, ದೈಹಿಕ ಶಿಕ್ಷಕ ಶ್ರೀನಿವಾಸ್ ಇದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.