ಶಾಶ್ವತ ನೀರಾವರಿಗೆ ಆಗ್ರಹಿಸಿ ಅರಬೆತ್ತಲೆ ಮೆರವಣಿಗೆ
ಬಂಗಾರಪೇಟೆ: ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ ದಲಿತ ಸಮಾಜ ಸೇನೆ ಮುಖಂಡರು ಪಟ್ಟಣದಲ್ಲಿ ಅರಬೆತ್ತಲೆ ಮೆರವಣಿಗೆ ಮಾಡಿ ಪ್ರತಿಭಟನೆ ಮಾಡಿದರು.
ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿಯನ್ನು ನೀಡಿದ ಕೋಲಾರ ಜಿಲ್ಲೆಯಲ್ಲಿ ಹನಿ ನೀರಿಗೂ ಜನರು ಸೇರಿದಂತೆ ಜಾನುವಾರುಗಳು ಪರದಾಡುವಂತಾಗಿದ್ದರೂ ಜನಪ್ರತಿನಿಧಿಗಳು ನೀರಿನ ವಿಷಯದಲ್ಲಿ ರಾಜಕೀಯ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ 9ವರ್ಷಗಳಿಂದ ಮಳೆಯಿಲ್ಲದೆ ಗುಳೆ ಹೋಗುವಂತಾಗಿದೆ.
ಸರ್ಕಾರ ಕ್ಷೇತ್ರವನ್ನು ಬರಪೀಡಿತ ಕ್ಷೇತ್ರವನ್ನು ಘೋಷಣೆ ಮಾಡಿದ್ದರೂ ಎಳ್ಳಷ್ಟು ಜನರಿಗೆ ಅನುಕೂಲಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿದ ಬಜೆಟ್ನಲ್ಲಿಯೂ ಜಿಲ್ಲೆಗೆ ನೀರಾವರಿ ಯೋಜನೆಗೆ ಹಣ ಮೀಸಲಿಡದೆ ತಾರತಮ್ಯ ಮಾಡಿದ್ದಾರೆ, ಬರಪೀಡಿದ ಕ್ಷೇತ್ರ ನೀಡಬೇಕಿದ್ದ ವಿಶೇಷ ಸ್ಥಾನಮಾನ ನೀಡಿಲ್ಲ ಇದರಿಂದ ಜನಜೀವನ ಡೋಲಾಯನವಾಗಿದೆ.
ಈ ಬಾರಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಮತ ಕೇಳಲು ಬರುವ ಪ್ರತಿನಿಧಿಗಳಿಗೆ ಮತದಾರರು ತಕ್ಕ ಪಾಠ ಕಲಿಸಬೇಕೆಂದು ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಪಟ್ಟಣದ ಕೋಲಾರ ಮುಖ್ಯ ರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಯಿಂದ ಅರಬೆತ್ತಲೆ ಮೆರವಣಿಗೆ ಆರಂಭಿಸಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ನಂತರ ತಹಸೀಲ್ದಾರ್ಗೆ ಮನವಿ ನೀಡಿದರು. ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಸೂಲಿಕುಂಟೆ ಆನಂದ್, ನಗರ ಅಧ್ಯಕ್ಷ ಹುಣಸನಹಳ್ಳಿ ರಮೇಶ್, ರಾಜೇಶ್, ಗೋಪಿನಾಥ್, ದೇವಗಾನಹಳ್ಳಿ ಯತೀಶ್, ಸ್ವಾಮಿ ಮತ್ತು ಜಾನು ಇದ್ದರು.