ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶೌಚಾಲಯ ನಿರ್ಮಿಸಿ: ಹಳ್ಳಿ ಜನರಿಗೆ ಸಲಹೆ

Rashmi Kasaragodu
Updated On : 22 Feb 2014, 2:10 am

ಕೋಲಾರ: ಶೌಚಾಲಯ ನಿರ್ಮಾಣ ಸ್ತ್ರೀ ಪುರುಷರೆನ್ನದೆ ಎಲ್ಲಿರಿಗೂ ಅನಿವಾರ್ಯವಾದ ವ್ಯವಸ್ಥೆ ಆಗಿದ್ದರೂ ಮಹಿಳೆಯರ ಆತ್ಮಗೌರವ ಹಾಗೂ ಸುರಕ್ಷತೆಯ ದೃಷ್ಟಿಯಿಂದಲೂ ಅಗತ್ಯವಾಗಿದ್ದು, ಪ್ರತಿಮನೆಗೊಂದು, ಶೌಚಾಲಯ ನಿರ್ಮಿಸಿಕೊಳ್ಳಬೇಕೆಂದು ಜಿ.ಪಂ. ನಿರ್ಮಲ ಭಾರತ ಅಭಿಯಾನ ಜಿಲ್ಲಾ ಸಮಾಲೋಚಕ ಎನ್. ಮುನಿಸ್ವಾಮಿನಾಯ್ಡು ತಿಳಿಸಿದರು.  ತಾಲೂಕಿನ ದೊಡ್ಡಹಸಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಹಳ್ಳಿಗಳಿಗೆ ನೈರ್ಮಲ್ಯ ಅರಿವು ಸಪ್ತಾಹದ ಅಂಗವಾಗಿ ಮನೆ ಮನೆ ಭೇಟಿ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.  ಗ್ರಾಮಗಳಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು, ಶೌಚಾಲಯ ರಹಿತ ಮನೆಗಳಿಗೆ ಭೇಟಿ ನೀಡಿ, ನಿರ್ಮಲ ಭಾರತ ಅಭಿಯಾನ ಸೇರಿದಂತೆ ವಿವಿಧ ಯೋಜನೆಗಳಿಂದ ಸರ್ಕಾರ ನೀಡುವ ಸೌಲಭ್ಯದ ಬಗ್ಗೆ ಜನರಲ್ಲಿ ಜಾಗೃತಿ ಉಂಟು ಮಾಡಬೇಕೆಂದರು.  ತಾಲೂಕು ಪಂಚಾಯಿತಿ ನಿರ್ಮಲ ಭಾರತ ಅಭಿಯಾನ ಸಂಯೋಜಕ ಜಿ. ಶ್ರೀನಿವಾಸ್ ಮಾತನಾಡಿ ಸಮಾಜ ಆರೋಗ್ಯವಾಗಿರಬೇಕಾದರೆ ಮೊದಲು ನೈರ್ಮಲ್ಯದ ಅರಿವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವುದರಿಂದ ವಿದ್ಯಾರ್ಥಿಗಳು ಪೋಷಕರಲ್ಲಿ ಅರಿವನ್ನುಂಟುಮಾಡುತ್ತಾರೆ. ಇದರಿಂದ ಪೋಷಕರು ಸರ್ಕಾರಿ ಸೌಲಭ್ಯಗಳ ಸದುಪಯೋಗ ಪಡಿಸಿಕೊಂಡು ಪ್ರತಿಮನೆಗೂ ಶೌಚಾಲಯ ಪಡೆಯಲು ಅಗತ್ಯ ನೆರವು ಪಡೆಯಬೇಕೆಂದರು. ದೊಡ್ಡಹಸಾಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿ. ಸತೀಶ್ಕುಮಾರ್ ಮಾತನಾಡಿ ಮನೆ ಮನೆಗಳ ಜಾಗೃತಿಯ ಜೊತೆಗೆ ಮನಸ್ಸಿನ ಪರಿವರ್ತನೆಯಾಗಬೇಕು. ಪ್ರತಿ ಮನೆಗೂ ಶೌಚಾಲಯ ಇರಬೇಕು ಎಂಬ ಸರ್ಕಾರದ ಆಶಯವನ್ನು ಜಾರಿ ಮಾಡಲು ಸಾರ್ವಜನಿಕರು ಸಹಕಾರಿಗಳಾಗಬೇಕೆಂದರು. ಕಾರ್ಯದರ್ಶಿ ಪ್ರಮೀಳಮ್ಮ, ಚಲಪತಿ, ಮುನಿಯಪ್ಪ ಮತ್ತಿತರರು ಮನೆ ಮನೆಗೂ ಭೇಟಿ ನೀಡುವ ಕಾರ್ಯದಲ್ಲಿ ಭಾಗವಹಿಸಿ, ಫಲಾನುಭವಿಗಳನ್ನು ಗುರ್ತಿಸಿ, ಶೌಚಾಲಯ ನೆರವು ಪಡೆದು ಶೌಚಾಲಯ ನಿರ್ಮಿಸಲು ಮಾರ್ಗದರ್ಶನ ನೀಡಿದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement