ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಾಹಿತ್ಯ ಕಲೆಗಳ ತವರೂರು ಗುಡಿಬಂಡೆ: ನರಸಿಂಹಮೂರ್ತಿ

Rashmi Kasaragodu
Updated On : 22 Feb 2014, 2:06 am

ಗುಡಿಬಂಡೆ: ಸಾಹಿತ್ಯ, ಕಲೆ, ನಾಟಕ, ನೃತ್ಯ ಮೊದಲಾದವುಗಳಲ್ಲಿ ಅನೇಕ ಕಲಾವಿದರು ಗುಡಿಬಂಡೆ ತಾಲೂಕಿನವರಾಗಿದ್ದು, ಪ್ರಸ್ತುತ ವಿಶ್ವಮಟ್ಟದಲ್ಲಿಯೂ ಗುಡಿಬಂಡೆಯ ಹೆಸರು ಉಲ್ಲೇಖಿಸಿರುವ ಅಂಶ ಮರೆಯುವಂತಿಲ್ಲ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ರಿಜಿಸ್ಟ್ರಾರ್ ಟಿ.ಜಿ. ನರಸಿಂಹಮೂರ್ತಿ ತಿಳಿಸಿದರು.
ಪಟ್ಟಣದ ಗಾಯತ್ರಿ ಪ್ರಸಾದ ಭವನದಲ್ಲಿ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘ ಹಾಗೂ ಐಶ್ವರ್ಯ ಕಲಾನೀಕೇತನ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಡೆದ ಉನ್ನತಿ ನಾಟಕ ಮತ್ತು ಕಲಾ ಉತ್ಸವದ ಕೊನೆಯ ದಿನದ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ಪೋಷಕರು ಮಕ್ಕಳನ್ನು ಸಮಾಜದಲ್ಲಿ ಒಳ್ಳೆಯ ಪ್ರಜೆಗಳನ್ನಾಗಿ ಬೆಳೆಸಲು ಮುಂದಾಗುವುದರ ಜೊತಗೆ ಅವರ ಬಗ್ಗೆ ಗಮನ ವಹಿಸಿ ಸಮಾಜ ಘಾತುಕರಾಗದಂತೆ ಕಾಳಜಿ ವಹಿಸಬೇಕು ಎಂದರು.
ಉನ್ನತಿ ಸಂಸ್ಥೆಯ ಮಹಾ ಪೋಷಕಿ ಬೆಂಗಳೂರಿನ ಆದಿನಾರಾಯಣಮ್ಮ ಕೃಷ್ಣಪ್ಪ ಮಾತನಾಡಿ, ಪೋಷಕರು ಮಕ್ಕಳಿಗೆ ಭಾರತೀಯ ಸಂಪ್ರದಾಯ, ಸಂಸ್ಕೃತಿ, ಜಾನಪದ ಕಲೆಗಳನ್ನು ಮೈಗೂಡಿಸಿಕೊಳ್ಳುವಂತೆ ಕಾಳಜಿ ವಹಿಸಬೇಕು ಎಂದರು.
ಉತ್ಸವದ ಕೊನೆಯ ದಿನದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕಲಾ ಕ್ಷೀತಿ ತಂಡದ ಖ್ಯಾತ ಭರತನಾಟ್ಯ ಪಟುಗಳಾದ ಸುಚಿತ್ರ ದಿವಾಕರ್ ಮತ್ತು ಅದಿತಾ ನೃತ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
 ಸ್ಥಳೀಯ ಭರತನಾಟ್ಯ ಕಲಾವಿದರಾದ ದುರ್ಗಶ್ರೀ, ರಕ್ಷಿತ, ಬಿಂದುಶ್ರೀ, ಗಾಮಿನಿ ಭರತನಾಟ್ಯ ನೃತ್ಯಗಳನ್ನು ಹಾಗೂ ಜಾನಪದ ಕಲಾವಿದ ಮುಖವೀಣೆ ಅಂಜಿನಪ್ಪ ನಡೆಸಿಕೊಟ್ಟ ಮುಖವೀಣೆ ವಾದನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.
ವೃತ್ತ ನಿರೀಕ್ಷಕ ಶಿವಕುಮಾರ್, ಪ್ರಾದೇಶಕ ವಲಯ ಅರಣ್ಯಾಧಿಕಾರಿ ಸುರೇಶ ಬಾಬು, ಗಾಯಕ ಎಲ್. ವೆಂಕಟೇಶ ಮೂರ್ತಿ, ಜಿಲ್ಲಾ ಕಸಾಪ ಅಧ್ಯಕ್ಷ ಹನುಮಂತರಾವ್, ತಾಲೂಕು ಕಸಾಪ ಅಧ್ಯಕ್ಷ ಸ.ನ. ನಾಗೇಂದ್ರ, ಉನ್ನತಿ ಸಂಸ್ಥೆಯ ಜಿ.ವಿ. ವಿಶ್ವನಾಥ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement