ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜಾತಿ ಪ್ರಮಾಣ ಪತ್ರ ನೀಡಲು ಆಗ್ರಹ

Mainashree
Updated On : 22 Feb 2014, 11:34 am

ಮುಳಬಾಗಲು: ತಾಲೂಕಿನ ಪರಿಶಿಷ್ಟಜಾತಿ ಮತ್ತು ಪಂಗಡಗಳಿಗೆ ಸೇರುವ ಉಪ ಜಾತಿಗಳಾದ ಬುಡ್ಗಜಂಗಮ, ಚನ್ನದಾಸರಿ, ಚನ್ನದಾಸರ್ ಮಾಂಗಾರ್ಡಿ ಹಾಗೂ ಇತರೆ ಜಾತಿಗಳವರಿಗೆ ಕೂಡಲೇ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ದಲಿತ ಸಂಘಟನೆಗಳ ಸಂಯುಕ್ತರಂಗದ ಪ್ರಮುಖರು ಗುರುವಾರ ತಾಲೂಕು ಉಪತಹಸೀಲ್ದಾರ್ ಕೊಂಡಪ್ಪನವರಿಗೆ ಮನವಿ ಸಲ್ಲಿಸಿದರು. ಈ ಜಾತಿಗಳವರಿಗೆ ಜಾತಿ ಪತ್ರ ನೀಡಲು ಆದೇಶವಿದ್ದರೂ ಕೆಲವು ದಲಿತ ಸಂಘಟನೆಗಳ ನಾಯಕರು ಜಾತಿ ಪ್ರಮಾಣ ಪತ್ರ ನೀಡಬಾರದೆಂದು ತಾಖಿತು ಮಾಡುತ್ತಿದ್ದಾರೆ, ಇದು ಸರಿಯಲ್ಲವೆಂದರು. ವೆಂಕಟೇಶ್, ಶ್ರೀನಿವಾಸ್, ಕೃಷ್ಣ,  ಬ್ಯಾಟಪ್ಪ, ಸಿ. ಮುನಿರಾಜ್, ಶ್ರೀನಿವಾಸ್, ರಾಮಣ್ಣ, ರಾಮಾಂಜಿ, ಗಣೇಶ್, ವೆಂಕಟರಾಮ್ ಇದ್ದರು.
ಪರಿಸರ ಸಂರಕ್ಷಣೆಯಲ್ಲಿ ಜನರು ತೊಡಗಲಿ
ಚಿಕ್ಕಬಳ್ಳಾಪುರ: ಸರ್ಕಾರಗಳು ಪರಿಸರ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ದಿಟ್ಟ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಜನರು ಸಹ ಸ್ವಯಂ ಪ್ರೇರಣೆಯಿಂದ ಪರಿಸರ ಸಂರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಸಲಹೆ ನೀಡಿದರು. ನಗರದ ಶ್ರೀದೇವಿ ಪ್ಯಾಲೇಸ್‌ನಲ್ಲಿ ರಾಜ್ಯ ನವ ಕರ್ನಾಟಕ ಪರಿಸರ ಸಂರಕ್ಷಣಾ ವೇದಿಕೆ ಆಯೋಜಿಸಿದ್ದ ಸಂಘದ ಉದ್ಘಾಟನೆ ಮತ್ತು ಪರಿಸರ ಮಾಲಿನ್ಯದ ವಿರುದ್ಧ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ಸುತ್ತಮುತ್ತಲಿನ ಪರಿಸರ ಉತ್ತಮವಾಗಿದ್ದಾಗ ಮಾತ್ರ ನಾವೆಲ್ಲರೂ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ.ಪರಿಸರ ಮಾಲಿನ್ಯದಿಂದ ಜನರು ಅನೇಕ ಕಾಯಿಲೆಗಳಿಗೆ ತುತ್ತಾಗಿ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕೆಂದರು. ಪ್ರಸ್ತುತ ದಿನಗಳಲ್ಲಿ ಎಲ್ಲಾ ರೀತಿಯಲ್ಲೂ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಇದನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಪೂರಕವಾದ ಯೋಜನೆಗಳನ್ನು ಸಮರ್ಪಕ ರೀತಿಯಲ್ಲಿ ಕಾರ್ಯ ರೂಪಕ್ಕೆ ತರುತ್ತಿಲ್ಲ ಎಂದ ಅವರು, ಜಾಗತೀಕ ತಾಪಮಾನದ ಹೆಚ್ಚಳದಿಂದ ಹವಾಮಾನದಲ್ಲಿ ವ್ಯತಿರಿಕ್ತ ಬದಲಾವಣೆಗಳು ಕಂಡು ಬರುತ್ತಿದ್ದು ಮುಂದೆ ಇನ್ನೂ ದುಷ್ಪರಿಣಾಮಗಳು ಹೆಚ್ಚಾಗುವುದಕ್ಕೂ ಮುಂಚೆ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.  ಸಾಲುಮರದ ತಿಮ್ಮಕ್ಕ ಮಾತನಾಡಿ, ಪ್ರತಿಯೊಬ್ಬರು ಗಿಡಗಳನ್ನು ಬೆಳೆಸುವ ಕಾರ್ಯವನ್ನು ತಪ್ಪದೇ ಮಾಡಬೇಕು. ಮರಗಿಡಗಳನ್ನು ಹೆಚ್ಚಿಗೆ ಕಡಿಯುವುದನ್ನು ಕಡಿಮೆ ಮಾಡುತ್ತ ಗಿಡಗಳನ್ನು ಬೆಳೆಸುತ್ತ ಹೋದರೆ ಪರಿಸರ ಸಂರಕ್ಷಣೆಯಾಗುತ್ತದೆ ಎಂದರು.  ರಾಜ್ಯ ಪರಿಸರ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ನೀರಾಜ್ ರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಬಗ್ಗೆ ತಿಳಿದುಕೊಳ್ಳುವುದರ ಜೊತೆಗೆ ಇತರರಲ್ಲೂ ಅರಿವು ಮೂಡಿಸಬೇಕು. ಈ ಕೆಲಸಕ್ಕಾಗಿ ತಮ್ಮ ಸಮಯವನ್ನು ಮೀಸಲಿಡಬೇಕೆಂದ ಅವರು, ಜನಾಂದೋಲನ ಮಾದರಿಯಲ್ಲಿ ಕಾರ್ಯಕ್ರಮಗಳನ್ನು ಕೈಗೊಂಡು ಸಮರ್ಪಕವಾಗಿ ಕಾರ್ಯ ನಿರ್ವಹಿಸಿದರೆ ಪರಿಸರ ಸಂರಕ್ಷಣೆಯಲ್ಲಿ ನಾವು ನಿಜವಾಗಲೂ ಯಶಸ್ಸನ್ನು ಕಾಣುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೆ.ವಿ ಮತ್ತು ಪಂಚಗಿರಿ ದತ್ತಿ ಅಧ್ಯಕ್ಷ ನವೀನ್  ಕಿರಣ್, ಪರಿಸರ ಸಂರಕ್ಷಣಾ ವೇದಿಕೆಯ ರಾಮೇಗೌಡ, ನವೀನ್ ಗೌಡ, ರಾಜಶೇಖರ್, ಗುಂಪುಮರದ ಆನಂದ್, ಡಾ. ಹೆಚ್.ಎಸ್. ಮಧುಕರ್ ಉಪಸ್ಥಿತರಿದ್ದರು.
ಚಿರತೆ ದಾಳಿ; ರೈತನಿಗೆ ತೀವ್ರ ಗಾಯ
ತುರುವೇಕೆರೆ: ತಾಲೂಕಿನ ಕಡೇಹಳ್ಳಿ ಬಳಿಯ ಇಳ್ಳೇನಹಳ್ಳಿ ಕಾವಲ್‌ನ ಪೊದರೆಯಲ್ಲಿ ಅವಿತು ಕುಳಿತಿದ್ದ ಚಿರತೆ ರೈತನ ಮೇಲೆ ದಾಳಿ ಮಾಡಿದ ಘಟನೆ ವರದಿಯಾಗಿದೆ.  ಕಡೇಹಳ್ಳಿ ಗ್ರಾಮದ ನಂಜುಂಡಯ್ಯ(40) ಕೂಲಿಗಾಗಿ ಇಳ್ಳೇನಹಳ್ಳಿ ಕಾವಲ್‌ನ ಲಕ್ಷ್ಮಣ ಎಂಬುವವರ ತೋಟದಲ್ಲಿದ್ದ ಸೀಬೇ ಗಿಡಗಳಿಗೆ ನೀರು ಹಾಕಲು ಶನಿವಾರ ಮಧ್ಯಾಹ್ನ ತೆರಳಿದ್ದಾರೆ. ಆ ವೇಳೆ ನಂಜುಂಡಯ್ಯನವರೊಂದಿಗೆ ಬಂದಿದ್ದ ಅವರ ಸಾಕುನಾಯಿ ಪೊದೆಯ ಕಡೆ ನೋಡುತ್ತಾ  ಬೊಗಳತೊಡಗಿದೆ. ನಾಯಿ ವಿಪರೀತವಾಗಿ ಬೊಗಳುವುದನ್ನು ಗಮನಿಸಿದ ನಂಜುಂಡಯ್ಯ ನಾಯಿ ಮುಖ ಮಾಡಿ ಬೊಗಳುತ್ತಿದ್ದ ಪೊದರಿನ ಕಡೆ ತೆರಳುತ್ತಿದ್ದಂತೆ ಪೊದೆಯೊಳಗೆ ಅಡಗಿ ಕುಳಿತಿದ್ದ ಚಿರತೆ ನಂಜುಂಡಯ್ಯನವರ ಮೇಲೆ ದಾಳಿ ಮಾಡಿದೆ. ಚಿರತೆ ನಂಜುಂಡಯ್ಯನವರ ತಲೆ ಹಾಗೂ ಕಿವಿಯನ್ನು ಕಚ್ಚಿ ಗಾಯಗೊಳಿಸಿದೆ. ದಾಳಿ ಮಿತಿ ಮೀರಿದಾಗ ಪ್ರಾಣಭಯವನ್ನೂ ಲೆಕ್ಕಿಸದ ನಂಜುಂಡಯ್ಯ ಚಿರತೆಯ ಬಾಯಿಗೆ ಕೈಯನ್ನು ಹಾಕಿ ಚಿರತೆಗೂ ಗಾಯ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement