ಮಹಾಶಿವರಾತ್ರಿ ಪ್ರಯುಕ್ತ ವಾಲಿಬಾಲ್ ಪಂದ್ಯಾವಳಿ
ಕೆಜಿಎಫ್: ಮಹಾಶಿವರಾತ್ರಿ ಪ್ರಯುಕ್ತ ನಗರದ ಕಿಂಗ್ಜಾರ್ಜ್ಹಾಲ್ ಆವರಣದಲ್ಲಿ ಕೆಜಿಎಫ್ನ ಕಾಸ್ಮೋಪಾಲಿಟನ್ ಕ್ಲಬ್ ಹಾಗೂ ಗೋಲ್ಡನ್ ವಾಲಿಬಾಲ್ ಕ್ಲಬ್ನ ಆಶ್ರಯದಲ್ಲಿ ದಕ್ಷಿಣ ವಲಯದ ಹಗಲು-ಇರುಲು ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಕ್ಲಬ್ನ ಉಪಾಧ್ಯಕ್ಷ ರಾಘವನ್ ಹಾಗೂ ಶ್ರೀಕಾಂತ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ಲಬ್ ಮುಂಭಾಗದ ಮೈದಾನದಲ್ಲಿ ಪ್ರತಿ ವರ್ಷ ಶಿವರಾತ್ರಿಯಂದು ವಾಲಿಬಾಲ್ ಪಂದ್ಯಾವಳಿ ನಡೆಸುತ್ತಿದ್ದು ಕಳೆದ ಆರು ವರ್ಷಗಳಿಂದ ಕ್ಲಬ್ ಮುಂಭಾಗದಲ್ಲಿ ಉದ್ಯಾನವನ ನಿರ್ಮಿಸಿದ್ದ ಕಾರಣ ಪಂದ್ಯಾವಳಿ ಸ್ಥಗಿತಗೊಳಿಸಲಾಗಿತ್ತು.
ಕಾಸ್ಮೋಪಾಲಿಟನ್ ಕ್ಲಬ್ನ ಆಡಳಿತ ಮಂಡಳಿ ವಾಲಿಬಾಲ್ ಆಟದ ಮೈದಾನ ನಿರ್ಮಿಸಿರುವ ಹಿನ್ನೆಲೆಯಲ್ಲಿ ಮತ್ತೆ ಈ ವರ್ಷದಿಂದ ಶಿವರಾತ್ರಿ ಹಬ್ಬದಂದು ವಾಲಿಬಾಲ್ ಪಂದ್ಯಾವಳಿ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ರಾಜ್ಯ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯಗಳಿಂದ ಸುಮಾರು 20 ತಂಡಗಳು ಪಾಲ್ಗೊಳ್ಳಲಿದ್ದು ಪ್ರಥಮ ಬಹುಮಾನ 25 ಸಾವಿರ, ದ್ವಿತಿಯ ಬಹುಮಾನ 15 ಸಾವಿರ, ತೃತಿಯ ಬಹುಮಾನ 10 ಸಾವಿರ ನಗದು ಬಹುಮಾನಗಳೊಂದಿಗೆ ಕಪ್ಗಳನ್ನು ನೀಡಲಾಗುವುದು. ಹಗಲು ಇರಲು ನೆಡಯುವ ಈ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳ ಆಟಗಾರರಿಗೆ ವೈದ್ಯಕೀಯ ಚಿಕಿತ್ಸೆ, ಊಟದ ವ್ಯವಸ್ಥೆಗಳನ್ನು ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದರು. ಗೋಷ್ಠಿಯಲ್ಲಿ ಗೋಲ್ಡನ್ ವಾಲಿಬಾಲ್ ಕ್ಲಬ್ ಮುಖ್ಯಸ್ಥ ವೇಲಾಯುದಂ, ಬಾಬು, ಕುಮಾರ್, ಕ್ರಿಸ್ಟೋಫರ್, ಮಂಜು, ಕೆ. ಬಾಬು ಕಾಸ್ಮೋಪಾಲಿಟನ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಅರುಣಾಚಲಂ ಇದ್ದರು.