ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವಿಮಾ ಸೌಲಭ್ಯ ಸದುಪಯೋಗಕ್ಕೆ ಸಲಹೆ

Mainashree
Updated On : 22 Feb 2014, 11:34 am

ಕೋಲಾರ: ಜಿಲ್ಲೆಯಲ್ಲಿ ಕೆನರಾ ಬ್ಯಾಂಕ್‌ವತಿಯಿಂದ ಚಾಯೀಸ್ ಇನ್ಶೂರೆನ್ಸ್ ಕಂ, ಅಪೆಲೋ ಮ್ಯೂನಿಕಲ್ ಹೆಲ್ತ್ ಇನ್ಶೂರೆನ್ಸ್ , ಯುನೈಟೆಡ್ ಇಂಡಿಯಾ ಆಶ್ರಯದಲ್ಲಿ ತನ್ನ ಗ್ರಾಹಕರಿಗೆ ಜೀವಭದ್ರತೆಯ ಯೋಜನೆ ಪ್ರಾರಂಬಿಸುತ್ತಿರುವುದು ಸಂತಸದ ವಿಷಯವಾಗಿದ್ದು, ಇದನ್ನು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು  ಶಾಸಕ ಆರ್. ವರ್ತೂರ್ ಪ್ರಕಾಶ್ ಕೋರಿದರು.
ನಗರದ ಕೆನರಾ ಬ್ಯಾಂಕ್ ಆವರಣದಲ್ಲಿ ಶನಿವಾರ ನಡೆದ ಗ್ರಾಹಕರಿಗೆ ಇನ್ಶೂರನ್ಸ್ ಯೋಜನೆ ಜಾರಿ ಮತ್ತು ಉಚಿತ ಕಣ್ಣಿನ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಕೆನರಾಬ್ಯಾಂಕ್ ಸ್ಥಾಪನೆಯಾಗಿ 40 ವರ್ಷಗಳಾಗಿದ್ದು, ಈವರೆಗೆ 6 ಕೋಟಿ ಗ್ರಾಹಕರಿಗೆ ವಿವಿಧ ರೀತಿಯ ಸಾಲ ಕೊಟ್ಟು ಆಪಾರ ಸೇವೆ ನೀಡಿದೆ. ಈಗ ಗ್ರಾಹಕರ ಜೀವ ಭದ್ರತೆಗೆ ಚಿಂತನೆ ನಡೆಸಿರುವುದು ಸ್ವಾಗತಾರ್ಹ ಎಂದರು.
ಕೋಲಾರದ  ಕೆನರಾಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಮಂಜುನಾಥ್ ಮಾತನಾಡಿ, ದೇಶದಲ್ಲಿ ಶೇ.4 ರಷ್ಟು ಮಂದಿ ಮಾತ್ರ ಜೀವಭದ್ರತೆಯ ವಿಮೆ ಪಾಲಸಿ ಪಡೆದಿದ್ದಾರೆ. ತಮ್ಮ ಬ್ಯಾಂಕಿನ ಗ್ರಾಹಕರು ತಮ್ಮ ಜೀವನ ಭದ್ರತೆಗಾಗಿ ವಿಮೆ ಪಾಲಸಿಗಳನ್ನು ತೆಗೆದುಕೊಳ್ಳಲು ನೂತನ ಯೋಜನೆಗೆ ಚಾಲನೆ ನೀಡಿದೆ ಎಂದರು.
ಬೆಂಗಳೂರು ವಿಭಾಗೀಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಜಯಶೀಲನ್, ಕೋಲಾರ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘ ಅಧ್ಯಕ್ಷ ಎಸ್. ಮುನಿಯಪ್ಪ, ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಆಡಳಿತಾಧಿಕಾರಿ ಸಂಪಂಗಿ, ಜಗನ್ನಾಥ್, ಅಪೋಲೋ ಮ್ಯೂನಿಕಲ್ ಹೆಲ್ತ್ ಇನ್ಶೂರೆನ್ಸ್, ಲೋಕೇಶ್, ಜಾಯೀಸ್ ಇನ್ಶೂರೆನ್ ಕಂಪನಿ ವ್ಯವಸ್ಥಾಪಕ ಮಂಜುನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement