ಸುದ್ದಿ ಸಂಕ್ಷೇಪ
ಹರಿ ಭಜನೆ ಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ
ಚಿಂತಾಮಣಿ: ಗ್ರಾಮೀಣದಿಂದ ನಗರ ಪ್ರದೇಶದ ವರೆಗೂ ಸರ್ಕಾರ ಹರಿ ಭಜನೆ ಮಂದಿರಗಳನ್ನು ನಿರ್ಮಿಸಲು ಆಗ್ರಹಿಸಿ ಹರಿನಾಮ ಸೇವಾ ಸಂಘ ವತಿಯಿಂದ ತಾಲೂಕು ಕಚೇರಿಗೆ ಮುತ್ತಗೆ ಹಾಕಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ತಾಲೂಕುಹರಿನಾಮ ಸೇವಾ ಸಂಘ ವತಿಯಿಂದ ನೂರಾರು ಭಕ್ತಾಧಿಗಳು ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ವೆಂಕಟಸ್ವಾಮಿ ಮಾತನಾಡಿ, ಹರಿನಾಮ ಹಾಗೂ ಹರಿಭಜನೆ ಮಾಡಲು ಹಳ್ಳಿಗಳಲ್ಲಿ ಮುಜರಾಯಿ ಇಲಾಖೆ ವತಿಯಿಂದ ಸ್ಥಳ ಮಂಜೂರು ಮಾಡಬೇಕು ಮತ್ತು ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯಿಂದ ಹಾರ್ಮೋನಿಯಂ, ಡೋಲು, ಡಕ್ಕೆ, ತಬಲ ವಿತರಿಸಿದಾಗ ಮಾತ್ರ ಸ್ವದೇಶಿ ಸಂಸ್ಕೃತಿ ಉಳಿಸಲು ಸಾಧ್ಯ ಎಂದರು. ರೈತಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ರಘುನಾಥರೆಡ್ಡಿ ಮಾತನಾಡಿ, ಹರಿನಾಮ ಸೇವಾ ರಂಗ ಮಂದಿರವನ್ನು ಚಿಂತಾಮಣಿ ನಗರದಲ್ಲಿ ನಿರ್ಮಿಸಲು ಸ್ಥಳೀಯ ಜನಪ್ರತಿನಿಧಿಗಳು ಮುತವರ್ಜಿ ವಹಿಸಿ ಹಾಗೂ ಎಲ್ಲಾ ಭಜನೆ ಮಂಡಳಿಗಳ ಸದಸ್ಯರಿಗೆ ಉಚಿತ ಸಂಚಾರಿ ಬಸ್ ಪಾಸ್ ನೀಡಬೇಕೆಂದು ಒತ್ತಾಯಿಸಿದರು. ಹರಿನಾಮ ಸೇವಾ ಸಂಘ ತಾಲೂಕು ಕಾರ್ಯದರ್ಶಿ ಸಿ.ವೈ. ನಾರಾಯಣಸ್ವಾಮಿ, ಪದಾಧಿಕಾರಿಗಳಾದ ಈಶ್ವರಪ್ಪ, ವೆಂಕಟರವಣಪ್ಪ, ಸೀತಮ್ಮ, ನಾರಾಯಣಮ್ಮ, ಮುನಿಯಮ್ಮ ಇದ್ದರು.
ಕೋಲಾರಕ್ಕೆ ನಾಳೆ ಹಾರ್ವರ್ಡ್ ವಿವಿ ವಿಜ್ಞಾನಿ ಡಾ.ಕಂಚಿ.ಕೆ.ಗಾಂಧಿ ಭೇಟಿ
ಕೋಲಾರ: ಕೋಲಾರ ಸಂಶೋಧನಾ ಸಂಸ್ಥೆ, ಕೋಲಾರ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಫೆ.24 ರ ಸೋಮವಾರ ಸಂಜೆ 4 ಗಂಟೆಗೆ ಪತ್ರಕರ್ತರ ಭವನದಲ್ಲಿ ಅಮೆರಿಕಾದ ಹಾರ್ವರ್ಡ್ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಜ್ಞಾನಿ ಡಾ.ಕಂಚಿ.ಕೆ.ಗಾಂಧಿ ಇವರೊಂದಿಗೆ ಶೈಕ್ಷಣಿಕ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಡಾ.ಗಾಂಧಿ ಅವರು ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಕ್ಷೇತ್ರದ ಸವಾಲುಗಳು ಹಾಗೂ ಪರಿಹಾರಗಳು ವಿಷಯ ಕುರಿತಂತೆ ತಮ್ಮ ಅಭಿಪ್ರಾಯ ಹಾಗೂ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
ಅಪಘಾತ; ಇಬ್ಬರಿಗೆ ಗಾಯ
ಶಿಡ್ಲಘಟ್ಟ: ಪಟ್ಟಣದ ರೇಲ್ವೆ ಸ್ಟೇಷನ್ ಮುಂಬಾಗದಲ್ಲಿ ಬೈಕ್ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರ ತಲೆಗೆ ಪೆಟ್ಟು ಬಿದ್ದಿರುವ ಘಟನೆ ನಡೆದಿದೆ.
ಮದು ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಸಹಿಸಲಾಗಿದೆ. ಈತನ ತಾತ ಬೀರಿಪ್ಪಗೆ ಅಲ್ಪ ಸ್ವಲ್ಪ ಗಾಯಗಳಾಗಿದ್ದು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಪಟ್ಟಣದ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.