ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಹನಿ ನೀರಾವರಿಯತ್ತ ಮಾಲೂರು ತಾಲೂಕಿನ ರೈತರು

Mainashree
Updated On : 22 Feb 2014, 11:33 am

ಮುಳಬಾಗಲು: ಸದಾ ಬರಗಾಲ, ಅಂತಂತ್ರ ಸ್ಥಿತಿಯಲ್ಲಿ ರೈತರು, ಅಂತರ್ಜಲಮಟ್ಟದ ಕುಸಿತದ ನಡುವೆಯೂ ಕೃಷಿ ಹಾಗೂ ತರಕಾರಿ ಬೆಳೆಗಳನ್ನು ಬೆಳೆಯುವಲ್ಲಿ ಮುಳಬಾಗಲು ತಾಲೂಕಿನ ರೈತರು ಯಶಲ್ವಿಯಾಗಿದ್ದಾರೆ.
ನೆರೆಯ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ವಿ. ಕೋಟ, ಕುಪ್ಪ ಸುತ್ತಮುತ್ತಲ ಹಳ್ಳಿಗಳಿಗೆ ಒಂದು ದಶಕದ ಹಿಂದೆಯೇ ಬಂದು ಅಲ್ಲಿನ ರೈತರ ಬಾಳನ್ನು ಹಸನು ಮಾಡಿರುವ ಹನಿ ನೀರಾವರಿಯನ್ನು ತಾಲೂಕಿನ ಬಹುತೇಕ ರೈತರು ಅನುಸರಿಸಲು ಮುಂದಾಗುತ್ತಿದ್ದಾರೆ. ಹನಿ ನೀರಾವರಿ ಅನ್ವಯವಾಗಿ ಸಲಕರಣೆಗಳನ್ನು ಪಡೆಯಲು ಸಹಾಯಧನ ಯೋಜನೆ ತಂದಿರುವುದರೊಂದಿಗೆ ರೈತರು ಕಡಿಮೆ ದಾಖಲೆಗಳೊಂದಿಗೆ ಹನಿ ನೀರಾವರಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.  ಪಹಣಿ, ಸ್ಕೆಚ್, ನೀರಾವರಿ ಸೌಲಭ್ಯ ಹಾಗೂ ತರಕಾರಿ ಬೆಳೆಯುತ್ತಿರುವ ದೃಢೀಕರಣ ಇಷ್ಟನ್ನು ಗ್ರಾಮ ಲೆಕ್ಕಾಧಿಕಾರಿಗಳಿಂದ ತಂದರೆ ಸಾಕು, ಸಬ್ಸಿಡಿ ಹಣ ನೇರವಾಗಿ ಫಲಾನುಭವಿಗಳ ಪಾಸ್ ಬುಕ್ಕಲ್ಲಿ ಜಮೆಯಾಗುತ್ತದೆ, ಈಗಾಗಲೇ ಹದಿನೈದು ಸಾವಿರಕ್ಕೂ ಹೆಚ್ಚಿನ ರೈತರು ಇದರ ಸೌಲಭ್ಯ ಪಡೆದಿದ್ದಾರೆ, ಇನ್ನು ಹೆಚ್ಚಿನ ಮಂದಿ ರೈತರು ಹನಿ ನೀರಾವರಿ ಸೌಲಭ್ಯಕ್ಕೆ ಮುಂದಾಗಿದ್ದಾರೆ ಎನ್ನುತ್ತಾರೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಳು, ರೈತರಿಗೆ ಹನಿ ನೀರಾವರಿ ಯೋಜನೆಯ ಸಂಪೂರ್ಣ ಅನುಷ್ಠಾನದ ಕುರಿತು ಹೆಚ್ಚಿನ ಮಾಹಿತಿ ಹಾಗೂ ತರಬೇತಿ ಬೇಕಿದೆ ಎನ್ನುತ್ತಾರೆ ಪಿ. ಗಂಗಾಪುರ ಗ್ರಾಮದ ಪ್ರಗತಿ ಪರ ರೈತ ಮುನಿರಾಮಯ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement