ಪ್ರಾಥಮಿಕ ಶಾಲೆಗಳಿಗಾಗಿ ರು. 21.5 ಸಾವಿರ ಕೋಟಿ
ಶ್ರೀನಿವಾಸಪುರ: ಪ್ರಾಥಮಿಕ ಶಾಲೆಗಳಿಗಾಗಿ 21.5 ಸಾವಿರ ಕೋಟಿ ರು.ಗಳನ್ನು ಖರ್ಚು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಶ್ವಾಸನೆ ನೀಡಿದರು.
ತಾಲೂಕಿನ ದಳಸನೂರು ಗ್ರಾಮದ ಫ್ರೌಢ ಶಾಲೆಯ ಸುವರ್ಣ ಮಹೋತ್ಸವ ಆಚರಣೆ ಉದ್ಘಾಟಿಸಿ ಮಾತನಾಡಿ, ಇಲ್ಲಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ಇಲ್ಲಿ ವ್ಯಾಸಂಗ ಮಾಡಿ ಉನ್ನತ ಹುದ್ದೆಗಳನ್ನು ಆಲಂಕರಿಸಿರುವ ಹಳೇ ವಿದ್ಯಾರ್ಥಿಗಳನ್ನು ಕೇಳಬೇಕೆಂದರು. ದಳಸನೂರು ಗ್ರಾಮದ ಸಮುದಾಯ ಭವನ ನಿರ್ಮಾಣಕ್ಕೆ 1 ಕೋಟಿ ರು.ಗಳನ್ನು ಮಂಜೂರು ಮಾಡುವುದಾಗಿ ಭರವಸೆ ನೀಡಿದರು. ಎಲ್. ಗೋಪಾಲಕೃಷ್ಣ, ಕೆ.ಎಚ್. ಮುನಿಯಪ್ಪ, ಕೆ.ಆರ್. ರಮೇಶ್ ಕುಮಾರ್ ಮಾತನಾಡಿದರು. ವಿ.ಆರ್. ಸುದರ್ಶನ್, ರತ್ನಮ್ಮ ಗಣೇಶ್, ಆರ್. ನಾರಾಯಣಸ್ವಾಮಿ, ಪರಮೇಶ್ವರನಾಯಕ್, ಕೂತ್ತೂರು ಜಿ. ಮಂಜುನಾಥ, ಡಿ.ಕೆ. ಶಿವಕುಮಾರ್, ನಸೀರ್ ಅಹಮದ್, ವೈ.ಎ. ನಾರಾಯಣಸ್ವಾಮಿ, ಬಿಸ್ಸೇಗೌಡ, ಅನಿಲ್ಕುಮಾರ್, ಜಿಲ್ಲಾಧಿಕಾರಿ ಡಿ.ಕೆ. ರವಿ ಇದ್ದರು.