ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಫುಟ್‌ಪಾತ್ ಒತ್ತುವರಿ ತೆರವು

Mainashree
Updated On : 23 Feb 2014, 10:59 am

ಮಾಲೂರು: ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸ್ಥಳೀಯ ಠಾಣೆ ಎಸ್‌ಐ ದಯಾನಂದ್ ನೇತೃತ್ವದ ಪೊಲೀಸ್ ತಂಡ  ಪಟ್ಟಣದಲ್ಲಿ ಕಾರ್ಯಾಚರಣೆ ನಡೆಸಿ ರಸ್ತೆ ಬದಿ ಒತ್ತುವರಿ ತೆರವುಗೊಳಿಸಿದರು.
ಬಸ್ ನಿಲ್ದಾಣದ ಮಾರಿಕಾಂಬ ಮಹಾದ್ವಾರದಿಂದ ಪುರಸಭೆವರೆಗೆ ಹಾಗೂ ಬಸ್‌ನಿಲ್ದಾಣದ ಸುತ್ತಮುತ್ತ ಪ್ರದೇಶದಲ್ಲಿ ರಸ್ತೆ ಬದಿ ಅಂಗಡಿಗಳ ಒತ್ತುವರಿ ಸೇರಿದಂತೆ ಕೈ ಗಾಡಿಗಳು, ದ್ವಿಚಕ್ರ ವಾಹನಗಳ ಅಡ್ಡಾದಿಡ್ಡಿ ನಿಲುಗಡೆಗಳಿಂದ ಪಾದಚಾರಿಗಳಿಗೆ ಅಡ್ಡಿಯಾಗುತ್ತಿತ್ತು. ಈ ಬಗ್ಗೆ ಹಲವು ಬಾರಿ ಪುರಸಭೆ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಿರಲಿಲ್ಲ.
ಸಾರ್ವಜನಿಕರ ಅಭಿನಂದನೆ; ರಸ್ತೆ ಬದಿ ಅಂಗಡಿಗಳ ಒತ್ತುವರಿ ವಿರುದ್ಧ ಎಸ್‌ಐ ದಯಾನಂದ್ ನಡೆಸಿದ ಕಾರ್ಯಾಚರಣೆಗೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ. ಇಂತಹ ಕಾರ್ಯಾಚರಣೆ ನಿರಂತರವಾಗಿ ನೆಡೆದರೆ ಪಟ್ಟಣದಲ್ಲಿ ಸುಗುಮವಾಗಿ ಸಂಚರಿಸಬಹುದು ಎನ್ನುತ್ತಾರೆ ನಾಗರಿಕರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement