ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರಮೇಶ್ ಕುಮಾರ್‌ಗೆ ಮಂತ್ರಿ ಆಗುವ ಅರ್ಹತೆ ಇದೆ

Mainashree
Updated On : 23 Feb 2014, 10:57 am

ಕೋಲಾರ: ಶಾಸಕ ರಮೇಶ್ ಕುಮಾರ್ ಬಗ್ಗೆ ನಿಮ್ಮಷ್ಟೇ ಪ್ರೀತಿ, ಅಭಿಮಾನ ನನಗೂ ಇದೆ. ಮಂತ್ರಿ ಆಗುವ ಎಲ್ಲ ಅರ್ಹತೆ ಇವರಿಗಿದೆ. ಆದರೆ, ಕಾರಣಾಂತರಗಳಿಂದ ಮಂತ್ರಿ ಮಂಡಳಕ್ಕೆ ಸೇರಿಕೊಳ್ಳಲಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರೀನಿವಾಸಪುರ ಕ್ಷೇತ್ರದ ರಮೇಶ್ ಕುಮಾರ್ ಅಭಿಮಾನಿಗಳಿಗೆ ಸ್ಪಷ್ಟಪಡಿಸಿದರು.
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಭಾನುವಾರ ಶ್ರೀನಿವಾಸಪುರಕ್ಕೆ ಬಂದಿದ್ದ ಸಂದರ್ಭದಲ್ಲಿ ರಮೇಶ್ ಕುಮಾರ್ ಅಭಿಮಾನಿಗಳು ಸ್ವಾಮಿಗೆ ಮಂತ್ರಿ ಏಕೆ ಮಾಡಿಲ್ಲ, ಅವರನ್ನು ಹೊಗಳಿದರೆ ಸಾಲದು ಮಂತ್ರಿ ಮಾಡಿ ಎಂದು ಒತ್ತಾಯಿಸಿದರು.
ಪರಿಸ್ಥಿತಿ ಅರಿತ ಮುಖ್ಯಮಂತ್ರಿ ಸಿದ್ದರಾಮಯ್ಯ, ರಮೇಶ್ ಕುಮಾರ್ ಅಪರೂಪದ ರಾಜಕಾರಣಿ, ನೇರ, ನಿಷ್ಟೂರ,ಪ್ರಾಮಾಣಿಕತೆಗೆ ಹೆಸರುವಾಸಿಯದವರು, ಬಡವರ ಬಗ್ಗೆ ಅಪಾರ ಕಾಳಜಿ ಇದೆ, ಶುದ್ಧ ಹಸ್ತದ ಮೇಧಾವಿ ಎಂದು ಬಣ್ಣಿಸಿದರು.
ಸಿಎಂ ಭಾಷಣದ ಮಧ್ಯೆ ಜನತೆ ಸ್ವಾಮಿಗೆ ಮಂತ್ರಿ ಗಿರಿ ಕೊಡಿ ಎಂದು ಒತ್ತಾಯಿಸಿದಾಗ, ವಿಚಲಿತರಾದ ಮುಖ್ಯಮಂತ್ರಿಗಳು, ನಿಮ್ಮಷ್ಟೇ ಪ್ರೀತಿ ನನಗೂ ಇದೆ, ಅನೇಕ ಕಾರಣಗಳಿಂದ ಮಂತ್ರಿ ಕೊಡಲು ಆಗಲಿಲ್ಲ, ಮುಂದೇನಾಗುತ್ತದೋ ನೋಡೋಣವೆಂದರು.
ಆಗಲೂ ಜನರು ಒತ್ತಾಯ ಮುಂದುವರೆಸಿದ್ದರಿಂದ ನಾನು ಇಲ್ಲಿಗೆ ಮಂತ್ರಿಗಿರಿ ವಿಚಾರ ಮಾತನಾಡಲು ಬಂದಿಲ್ಲ, 5 ವರ್ಷಗಳಲ್ಲಿ ಮಾಡಬೇಕಾದ ಅಭಿವೃದ್ಧಿ ಕೆಲಸವನ್ನು ನನ್ನ ಕೈಯಲ್ಲಿ ಈಗಲೇ ಮಾಡಿಸಿದ್ದಾರೆ, ಅವರು ಹೇಳಿದ್ರೆ ಇಲ್ಲ ಎಂದು ಹೇಳಲಾಗದಷ್ಟು ಸ್ನೇಹ ನಮ್ಮಬ್ಬರ ನಡುವೆ ಇದೆ ಎಂದು ರಮೇಶ್ ಕುಮಾರ್ ಜೊತೆ ಇರುವ ಆತ್ಮೀಯತೆಯನ್ನು ಹೊರಗೇಡವಿದರು.
ಶ್ರೀನಿವಾಸಪುರ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿ ಹಾಗೂ ಉದ್ಘಾಟನೆಗೊಂಡ ಕಾರ್ಯಗಳನ್ನು ಮುಖ್ಯಮಂತ್ರಿಗಳು ವಿವರಿಸಿದರು. ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಮಾತನಾಡಿ, ಮುಖ್ಯಮಂತ್ರಿಗಳನ್ನು ಹಾಡಿ ಹೊಗಳಿದಲ್ಲದೆ, ಶ್ರೀನಿವನಾಸಪುರ ಕ್ಷೇತ್ರದ ಇತಿಹಾಸದಲ್ಲೇ ಇಷ್ಟೊಂದು ದೆಡ್ಡೂ ಪ್ರಮಾಣದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಸಿಕ್ಕಿರಲಿಲ್ಲವೆಂದು ಅಭಿಪ್ರಾಯಿಸಿದರು.
ಎತ್ತಿನ ಹೊಳೆ ಯೋಜನೆಗೆ ಬೇಗನೆ ಚಾಲನೆ ಸಿಗಬೇಕು, ತಾಲೂಕಿನ ಹೊಗಳಗೆರೆಯಲ್ಲಿ ಮಾವು ಮಂಡಳಿ ಕಚೇರಿ ಸ್ಥಾಪನೆ ಮಾಡಬೇಕು, ಮಹಾರಾಜರು ನಿರ್ಮಿಸಿರುವ 4,323 ಕೆರೆಗಳ ಸಮಗ್ರ ಅಭಿವೃದ್ಧಿಯ ಮೂಲಕ ನೀರಿನ ಸಮಸ್ಯೆ ನಿವಾರಣೆ ಮಾಡಬೇಕೆಂದು ಮುಖ್ಯಮಂತ್ರಿಗಳನ್ನು ಕೋರಿದರು.
 ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, ತಾವು ರೇಲ್ವೆ ಸಚಿವರಾಗಿದ್ದಾಗ ಜಿಲ್ಲೆಗೆ ರೇಲ್ವೆ ಕೋಚ್ ಮಂಜೂರು ಆಗಿದೆ. ಇದಕ್ಕೆ ಬೇಕಾದ 1,500 ಕೋಟಿ ಪೈಕಿ ರಾಜ್ಯ ಸರ್ಕಾರ ಅರ್ಧ ಹಣ ಹಾಗೂ ಭೂಮಿ ನೀಡಲು ಒಪ್ಪಿದೆ. ಶಾಶ್ವತ ನೀರಾವರಿ ಯೋಜನೆಗೂ ರಾಜ್ಯ ಸರ್ಕಾರದಿಂದ ಅನುಕೂಲವಾಗಬೇಕೆಂದು ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement