ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಟೇಕಲ್: ಮಾರ್ಕೊಂಡಯ್ಯ ಡ್ಯಾಮ್ನಿಂದ ಪೈಪ್ ಲೈನ್ ಹಾಕುವ ಬೃಹತ್ ಯೋಜನೆಗೆ 40 ಕೋಟಿ ರುಪಾಯಿ ನಷ್ಟ ಮಾಡಲಾಗಿದೆ ಎಂದು ಶಾಸಕ ಕೆ.ಎಸ್. ಮಂಜುನಾಥಗೌಡ ಆರೋಪಿಸಿದರು.
ನೂಟವೆ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಇದೀಗ ಎಲ್ಲಾ ಪೈಪ್ ಲೈನ್ಗಳು ಶಿಥಿಲಗೊಂಡಿವೆ. ಮಾಲೂರು ತಾಲೂಕಿನ ಜನತೆಗೆ ಒಂದು ಹನಿ ಕುಡಿಯುವ ನೀರು ಸಿಕ್ಕಿಲ್ಲ ಎಂದರು. ದಿನ್ನಹಳ್ಳಿ, ತೊರಲಕ್ಕಿ ಗಡಿ ಭಾಗದ ಗ್ರಾಮಗಳಿಗೆ 6 ಕೋಟಿ ರುಪಾಯಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ಪ್ರಾರಂಭಿಸಲಾಗುತ್ತಿದ್ದು ದೇವರಹಳ್ಳಿ, ರಾಯಸಂದ್ರ, ದಿಗೂರು, ಮೇಲೂರು ಇನ್ನೂ ಸುತ್ತಮುತ್ತಲ ಗಡಿ ಭಾಗದ ಗ್ರಾಮಗಳಿಗೆ ರಸ್ತೆ ನಿರ್ಮಿಸಲಾಗುತ್ತದೆ ಎಂದರು.
ತಾಪಂ ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡ, ಬಿ.ಜಿ. ಮುನಿಶಾಮಿಗೌಡ, ಮಾಜಿ ಜಿ.ಪಂ.ಸದಸ್ಯ ಹನುಮಂತಪ್ಪ ಮಾತನಾಡಿದರು. ಕ್ಷೇತ್ರೇನಹಳ್ಳಿ ವೆಂಕಟೇಶ್, ಮುನೇಗೌಡ, ಎಸ್.ಜಿ. ರಾಮಮೂರ್ತಿ, ಮಮತಾಅಣ್ಣಯ್ಯ, ಸವಿತಾನಾಗರಾಜ್, ಗೋಪಾಲಪ್ಪ, ಕಿರಣ್ ಇದ್ದರು. ಇದೇ ಸಂದರ್ಭದಲ್ಲಿ ಸ್ಥಳೀಯರು ಶಾಸಕ ಮಂಜುನಾಥಗೌಡ ಹಾಗೂ ಕೆ.ವೈ. ನಂಜೇಗೌಡರನ್ನು ಅಭಿನಂದಿಸಿದರು.