ವಿಶ್ವದಲ್ಲಿ ಭಾರತ ಪೋಲಿಯೊ ಮುಕ್ತ ದೇಶ
ಮುಳಬಾಗಲು: ವಿಶ್ವದಲ್ಲಿಯೇ ಭಾರತ ದೇಶ ಪೋಲಿಯೋ ಮುಕ್ತ ದೇಶವಾಗಿದೆ. ಅದನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ನೂಗಲಬಂಡೆಯಲ್ಲಿ ಪಲ್ಸ್ಪೋಲಿಯೋ ಲಸಿಕೆ ಕಾರ್ಯಕ್ರಮ ಉದ್ಫಾಟಿಸಿ ಮಾತನಾಡಿ, ತಾಲೂಕಿನಲ್ಲಿ 26,710 ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗುತ್ತಿದೆ, 51.419 ಮನೆಗಳಿಗೆ ಮೂರು ದಿನ ಭೇಟಿ ನೀಡಿ ಹನಿ ಹಾಕಿಸಲಾಗುವುದು ಎಂದರು.
ತಾಪಂ ಅಧಿಕಾರಿ ಅರುಣಕುಮಾರ್, ಸಿಡಿಪಿಒ ರಾಮಯ್ಯ, ಮೇಲ್ವಿಚಾರಕಿ ವಿಜಯಮ್ಮ, ರೋಟರಿ ಸೆಂಟ್ರಲ್ ಅಧ್ಯಕ್ಷ ವಿ.ಆರ್. ಪ್ರಭಕಾರಗುಪ್ತ, ಉಪಾಧ್ಯಕ್ಷ ವೆಂಕಟಗಿರಿಯಪ್ಪ,ನಾರಾಯಣಸ್ವಾಮಿ, ಟೆ.ಎಸ್. ರಮೇಶ್, ಜಬೀಉಲ್ಲಾ, ಸರ್ದಾರ್, ವಕೀಲ ಕೂಲದೇವಿ ರಿಯಾಜ್ ಇದ್ದರು.