ವೈದ್ಯರು ಗ್ರಾಮೀಣ ಸೇವೆಗೆ ಮುಂದಾಗಲಿ
ಶಿಡ್ಲಘಟ್ಟ: ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವ ಮನೋಭಾವ ವೈದ್ಯರಲ್ಲಿ ಬೆಳೆಯಬೇಕೆಂದು ರಾಜ್ಯ ಉಚ್ಚನ್ಯಾಯಾಲಯದ ನ್ಯಾಯಾಧೀಶ ರಾಮ್ಮೋಹನ್ರೆಡ್ಡಿ ಹೇಳಿದರು.
ಕೊತ್ತನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಲಯನ್ಸ್ಕ್ಲಬ್ ಬೆಂಗಳೂರು ಮತ್ತು ವಾಸನ್ ಐಕೇರ್ ಆಸ್ಪತ್ರೆ ಆಶ್ರಯದಲ್ಲಿ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಜನರು ಬಹಳಷ್ಟು ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ, ಈ ಭಾಗದಲ್ಲಿ ಜನರ ಆರೋಗ್ಯದ ದೃಷಿಯಿಂದ ಗ್ರಾಮೀಣ ಭಾಗಗಳಲ್ಲಿ ವಾಸ್ತವ್ಯ ಹೂಡಿ ವೈದ್ಯಕೀಯ ಚಿಕಿತ್ಸೆ ನೀಡುವ ವೈದ್ಯರು ಕಡಿಮೆಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಬೆಂಗಳೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಎನ್. ಸುಬ್ಬಾರೆಡ್ಡಿ ಮಾತನಾಡಿದರು. ಆರೋಗ್ಯ ತಪಾಸಣೆ ಮತ್ತು ಔಷಧಗಳ ವಿತರಣೆ ಮಾಡಲಾಯಿತು. ತಾಲೂಕು ವಕೀಲರ ಸಂಘದ ಎ. ಪಾಪಿರೆಡ್ಡಿ, ರಾಮಕೃಷ್ಣ, ವಿವೇಕ್ರೆಡ್ಡಿ, ಸುಶೀಲಾ, ಉಪಾಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಶರವಣನ್, ಖಜಾಂಚಿ ಪಿ.ಸಿ. ಕಸ್ತೂರಿ, ಮಾರಪ್ಪ, ಗೋವಿಂದರಾಜು, ರಾಜಗೋಪಾಲ್ ಇದ್ದರು.