ಶಿಡ್ಲಘಟ್ಟದಲ್ಲಿ ಪಲ್ಸ್‌ಪೋಲಿಯೊ
ಶಿಡ್ಲಘಟ್ಟ: ತಾಲೂಕಿನಾದ್ಯಂತ ದ್ವಿತೀಯ ಹಂತದ ಪಲ್ಸ್‌ಪೋಲಿಯೋ ಕಾರ್ಯಕ್ರಮ ಯಶಸ್ವಿಯಾಗಿ ನೆವೇರಿತು.
ಲಸಿಕೆ ಹಾಕಿಸಿ ಪೋಲಿಯೋ ಮುಕ್ತ ಸಮಾಜದ ನಿರ್ಮಾಣಕ್ಕೆ ಸಹಕಾರ ನೀಡಬೇಕೆಂದು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಅಮರೇಶ್‌ಗದ್ದಿ ತಿಳಿಸಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪಟ್ಟಣದಲ್ಲಿ ಕೊಳಗೇರಿ ಪ್ರದೇಶಗಳಲ್ಲಿ ಪಲ್ಸ್‌ಪೋಲಿಯೋ ಕಾರ್ಯಕ್ರಮ ಯಶಸ್ವಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು. ಡಾ. ಗಿರೀಶ್, ತಾಲೂಕು ಆರೋಗ್ಯ ಸಹಾಯಕ ದಾದಾಪೀರ್, ಆರೋಗ್ಯ ಶಿಕ್ಷಣಾಧಿಕಾರಿ ಕಿರಣ್‌ಕುಮಾರ್, ಶ್ರೀಧರ್, ನಾಗರಾಜ್ ಇದ್ದರು.
ಸರಳ ವಿವಾಹಕ್ಕೆ ಮುಂದಾಗಿ: ಶ್ರೀ
ಚಿಕ್ಕಬಳ್ಳಾಪುರ: ಸಾಲದಲ್ಲಿ ಅದ್ಧೂರಿಯಾಗಿ ಮದುವೆಯಾಗಿ ತೊಂದರೆ ಅನುಭವಿಸುವುದರ ಬದಲು ಸರಳವಾಗಿ ವಿವಾಹವಾಗುವುದರ ಮೂಲಕ ಒಳ್ಳೆಯ ದಾಂಪತ್ಯ ಜೀವನ ನಡೆಸುವುದೇ ಲೇಸು ಎಂದು ಚಿಕ್ಕಬಳ್ಳಾಪುರ ಅದಿಚುಂಚನಗಿರಿ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.
ನಗರದ ಹೊರ ವಲಯದಲ್ಲಿರುವ ಶ್ರೀ ವೀರಾಂಜೇನಯಸ್ವಾಮಿ ದೇವಾಲಯದಲ್ಲಿ ಹೊಸಕೋಟೆಯ ಈಶ್ವರ್ ವಿಶ್ವಕರ್ಮ ಸಂಘ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಜನರನ್ನು ಸಂತೃಪ್ತಿಗೊಳಿಸಲು ಅನೇಕರು ದುಬಾರಿಯಾಗಿ ಮದುವೆ ಮಾಡುತ್ತಾರೆ. ಇಂತಹ ಸಂದರ್ಭಭದಲ್ಲಿ ಅಧಿಕ ಬಡ್ಡಿಗೆ ಇಲ್ಲವೇ ಆಸ್ತಿಪಾಸ್ತಿಗಳನ್ನು ಅಡಯಿಟ್ಟು ಸಾಲಗಾರರಾಗಿ ಮುಂದೆ ತೊಂದರೆ ಅನುಭವಿಸುತ್ತಾರೆ ಎಂದರು.
ಮಾಜಿ ಸಚಿವ ಬಿ.ಎನ್. ಬಚ್ಚೇಗೌಡ ಮಾತನಾಡಿ, ಉಳ್ಳವರು ಉಚಿತ ಸಾಮೂಹಿಕ ವಿವಾಹ ಮತ್ತು ಆರೋಗ್ಯ ಶಿಬಿರಗಳನ್ನು ಹೆಚ್ಚಿಗೆ ಹಮ್ಮಿಕೊಳ್ಳುವುದರಿಂದ ಬಡ ಜನರಿಗೆ ತುಂಬಾ ಅನುಕೂಲವಾಗುತ್ತದೆ. ಅಲ್ಲದೇ ಉಳ್ಳವರಿಗೆ ಜನರ ಸೇವೆ ಮಾಡಿದಂತಹ ತೃಪ್ತಿ ಸಿಗುತ್ತದೆ ಎಂದರು. ಶ್ರೀನಿವಾಸ್, ಚಂದ್ರಶೇಖರ್, ಬ್ರಹ್ಮಚಾರಿ, ಎಸ್.ಬಿ.ಎಂ. ಮ್ಯಾನೇಜರ್ ಲಯನ್ ಸುನಿಲ್ ಇದ್ದರು.