ಹಂದಿ ಜೋಗಿ ಸಮುದಾಯದ ಪ್ರತಿಭಟನೆ
ಗೌರಿಬಿದನೂರು: ಇತ್ತೀಚೆಗೆ ವಿಚಿತ್ರ ಕಾಯಿಲೆಗಳು ಜನರನ್ನು ಕಾಡುತಿದ್ದು ಇದನ್ನೆ ನೆಪವೊಡ್ಡಿ ಹಂದಿ ಸಾಕಾಣಿಕೆದಾರರ ಶೋಷಣೆ ಮಾಡುತ್ತಿರುವ ಪುರಸಭೆ ಅಧಿಕಾರಿಗಳ ವಿರುದ್ಧ ಹಂದಿ ಸಾಕಾಣಿಕೆದಾರರು ಪ್ರತಿಭಟನೆ ನಡೆಸಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಹಂದಿ ಜೋಗಿ ಸಮುದಾಯದ ವತಿಯಿಂದ ಪಟ್ಟಣದ ಹೊರವಲಯದಲ್ಲಿ ನಿವೇಶನ ಮತ್ತು ಹಂದಿ ಸಾಕಾಣಿಕೆಗೆ ಜಾಗ ನೀಡಲು ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಸೊಣ್ಣಪ್ಪ ಮಾತನಾಡಿ, ಹಂದಿ ಸಾಕಾಣಿಕೆ ವಂಶಪಾರಂಪರ್ಯ ವೃತ್ತಿಯಾಗಿದ್ದು, ಈ ವೃತ್ತಿ ನಂಬಿ ತಾಲ್ಲೂಕಿನಾದ್ಯಂತ ಸಾವಿರಾರು ಕುಟುಂಬಗಳು ಜೀವನ ಸಾಗಿಸುತ್ತಿವೆ. ರೋಗಗಳ ನೆಪವೊಡ್ಡಿ ಅಧಿಕಾರಿಗಳು ಹಂದಿಗಳ ಮಾರಣಹೋಮ ಮಾಡುತ್ತಿರುವುದು ಖಂಡನೀಯ ಎಂದು ತಿಳಿಸಿದರು. ಜಯಣ, ಕೃಷ್ಣಪ್ಪ, ಗಂಗರತ್ನಮ್ಮ, ನರಸಮ್ಮ, ಸೊಣ್ಣಪ್ಪ, ಸುಬ್ಬಣ್ಣ, ರಮೇಶ್ ಇದ್ದರು.
ಆತ್ಮಹತ್ಯೆಗೆ ಯತ್ನಿಸಿದ್ದ ರಾಜಾರೆಡ್ಡಿ ಸಾವು
ಮಾಲೂರು: ಓಡಿ ಹೋದ ಮಗಳ ವರ್ತನೆಯಿಂದ ಬೇಸತ್ತು ವಿಷ ಸೇವಿಸಿ ಕೋಲಾರದ ಜಾಲಪ್ಪ ಆಸ್ವತ್ರೆಯಲ್ಲಿ ದಾಖಲಾಗಿದ್ದ ಪೋಷಕರಲ್ಲಿ ಚಿಕಿತ್ಸೆ ಫಲಕಾರಿಯಾಗದೆ ತಂದೆ ರಾಜಾರೆಡ್ಡಿ(45) ಸಾವನ್ನಪ್ಪಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ತಾಲೂಕಿನಲ್ಲಿ ರೈತ ಸಂಘ ಸೇರಿದಂತೆ ಹಲವು ಸಂಘಟನೆಗಳಲ್ಲಿ ಕ್ರೀಯಾಶೀಲರಾಗಿದ್ದ ತಾಲೂಕಿನ ಚೌಡದೇನಹಳ್ಳಿಯ ರಾಜಾರೆಡ್ಡಿ ಸ್ಥಳೀಯ ಜೆಎಸ್ಎಸ್ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ತಮ್ಮ ಮಗಳು ಪ್ರತಿಮಾ ತಮ್ಮನ್ನು ನಿರ್ಲಕ್ಷಿಸಿ ಪ್ರಿಯಕರನೂಡನೆ ಓಡಿಹೋಗಿದ್ದ ಹಿನ್ನೆಲೆಯಲ್ಲಿ ಮನನೂಂದು ಹೆಂಡತಿ ಅಮೃತ ಜತೆ ಸೇರಿ ಇಲ್ಲಿನ ಸರ್ಕಾರಿ ಕಾಲೇಜು ಬಳಿ ವಿಷ ಸೇವಿಸಿದ್ದರು. ಈ ಸಂಬಂಧ ಕೋಲಾರದ ಜಾಲಪ್ಪ ಆಸ್ವತ್ರೆಗೆ ಸೇರಿಸಲಾಗಿದ್ದ ದಂಪತಿಗಳಲ್ಲಿ ತಂದೆ ರಾಜಾರೆಡ್ಡಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಸಾವನ್ನಪ್ಪಿದ್ದು, ಅತನ ಪತ್ನಿ ಅಮೃತ ಸ್ಥಿತಿ ಇನ್ನೂ ಗಂಭೀರವಾಗಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆ ಸ್ಥಳೀಯ ಪೊಲೀಸರು ಘಟನೆಗೆ ಕಾರಣವಾಗಿ ಪರಾರಿಯಾಗಿದ್ದ ಪ್ರೇವಿಗಳಿಬ್ಬರನ್ನು ಬಂಧಿಸಿದ್ದು, ಆರೋಪಿ ಜಕ್ಕ ಸಂದ್ರದ ಶಿವಕುಮಾರ್ನನ್ನು ನ್ಯಾಯಾಂಗ ಬಂಧನಕ್ಕೆ ಹಾಗೂ ಅಪ್ರಾಪ್ತಿಯಾಗಿರುವ ಪ್ರತಿಮಾಳನ್ನು ರಿಮ್ಯಾಂಡ್ ಹೋಂಗೆ ಸೇರಿಸಲಾಗಿದೆ.
ಅಪರಿಚಿತ ಶವ ಪತ್ತೆ; ಕೊಲೆ ಶಂಕೆ
ಮಾಲೂರು: ತಾಲೂಕಿನ ಭಾವನಹಳ್ಳಿ ರಸ್ತೆಯಲ್ಲಿ ಕೂಲೆಯಾಗಿರುವ ಅಪರಿಚಿತ ಶವವೂಂದು ಪತ್ತೆಯಾಗಿದ್ದು, ಬೇರೆಡೆ ಕೊಲೆ ಮಾಡಿ ಇಲ್ಲಿ ತಂದು ಹಾಕಿರುವ ಶಂಕೆ ವ್ಯಕ್ತವಾಗಿದೆ. ತಾಲೂಕಿನ ಭಾವನಹಳ್ಳಿ ಹಾಗೂ ಪುರದ ನಡುವೆಯಲ್ಲಿ ರಸ್ತೆ ಬದಿಯ ಕಾಲುವೆಯೊಂದರಲ್ಲಿ ಕತ್ತು ಹಾಗೂ ಮುಖವೆನ್ನೆಲ್ಲ ಹಗ್ಗದಿಂದ ಕಟ್ಟಿರುವ ಸ್ಥಿತಿಯಲ್ಲಿ ಪುರುಷ ಶವ ಕಂಡು ಬಂದಿದೆ. ಶವದ ಮೇಲಿರುವ ಶರ್ಟುನಲ್ಲಿ ಚಿಂತಾಮಣಿ ಟೈಲರ್ ಶಾಪ್ ಹೆಸರಿದ್ದು, ಶವ ಸಿಕ್ಕ ಸ್ಥಳಕ್ಕೆ ಸಮೀಪವಾಗಿರುವ ಹೋಂಡಾ ಕಂಪನಿ ಅಥವಾ ನರಸಪುರ ಕೈಗಾರಿಕಾ ಪ್ರಾಗಾಂಣದ ಕಾರ್ಮಿಕನಾಗಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳೀಯ ಠಾಣೆಯ ಎಸ್ಐ ದಯಾನಂದ್ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಾಗಿದೆ.
ರೈಲಿಗೆ ಸಿಲುಕಿ ವ್ಯಕ್ತಿ ಸಾವು
ಕೆಜಿಎಫ್: ಚಲಿಸುತ್ತಿದ್ದ ರೈಲಿಗೆ ಸಿಲುಕಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉರಿಗಾಂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರಿನ ನಿವಾಸಿ ಸಂಜಯ್(26) ಎಂಬುವರು ನಗರದ ಬೌರಿಲಾಲ್ಪೇಟೆಯಲ್ಲಿರುವ ತಮ್ಮ ಅತ್ತೆ ಮನೆಗೆ ಬಂದಿದ್ದು ಮತ್ತೆ ಬೆಂಗಳೂರಿಗೆ ಹೋಗಲು ಭಾನುವಾರ ರಾತ್ರಿ ಉರಿಗಾಂ ರೈಲ್ವೆ ನಿಲ್ದಾಣದಲ್ಲಿ ಮಾರಿಕುಪ್ಪಂ ಬೆಂಗಳೂರು ಸ್ವರ್ಣ ಪ್ಯಾಸೆಂಜರ್ ರೈಲು ಹತ್ತಲು ಹೋಗಿ ರೈಲಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಂಗಾರಪೇಟೆ ರೇಲ್ವೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಾಗಿದೆ.