ಅಪಘಾತದಲ್ಲಿ ವ್ಯಕ್ತಿ ಸಾವು
ಬಾಗೇಪಲ್ಲಿ: ಸರಕು ಸಾಗಾಣಿಕೆ ವಾಹನ ಹಾಗೂ ಬೈಕ್ ನಡುವೆ ಮುಖಮುಖಿ ಡಿಕ್ಕಿ ಸಂಭವಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ರಾಮನಾಯಕ್ ಅಲಿಯಾಸ್ ರಾಮು(43) ಮೃತ ದುರ್ದೈವಿ. ಈತ ಮತ್ತು ಈತನ ಸ್ನೇಹಿತ ಫಕೃದ್ದೀನ್ ಬೈಕಿನಲ್ಲಿ ಪಟ್ಟಣದಿಂದ ಎನ್.ಹೆಚ್.7ರ ಹೆದ್ದಾರಿಯಲ್ಲಿರುವ ಪೆಟ್ರೋಲ್ ಬಂಕಲ್ಲಿ ಪೆಟ್ರೋಲ್ ಹಾಕಿಸಲು ಟಿ.ಬಿ.ಕ್ರಾಸ್ ಬಳಿಯ ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಬೆಂಗಳೂರು ಕಡೆಯಿಂದ ಪೈಪ್ಗಳನ್ನು ತುಂಬಿಕೊಂಡು ಬಾಗೇಪಲ್ಲಿ ಕಡೆಗೆ ಬರುತ್ತಿದ್ದ ಕ್ಯಾಂಟರ್ ಡಿಕ್ಕಿ ಹೊಡೆದಿದ್ದು ರಾಮು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಫಕೃದ್ದೀನ್ ಸಣ್ಣಪುಟ್ಟ ಗಾಯಗಳೊಂದಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕ್ಸಿತೆ ಪಡೆಯುತ್ತಿದ್ದಾನೆ. ಈ ಸಂಬಂಧ ವಾಹನವನ್ನು ವಶಪಡಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.