ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಬಕಾರಿ ಇಲಾಖೆಯಲ್ಲಿ ಸಮನ್ವಯದ ಕೊರತೆ

Rashmi Kasaragodu
Updated On : 26 Feb 2014, 1:34 am

ಕೋಲಾರ: ಜಿಲ್ಲೆಯ ಅಬಕಾರಿ ಇಲಾಖೆಯಲ್ಲಿ ಸಮನ್ವಯದ ಕೊರತೆ ಇರುವುದರಿಂದ ಇಲಾಖೆಯ ಕೆಲ ಕಾರ್ಯಗಳು ಸಮರ್ಪಕವಾಗಿ ಸಾಗುತ್ತಿಲ್ಲವೆಂದು ಜಿಲ್ಲಾಧಿಕಾರಿ ಡಿ.ಕೆ. ರವಿ ಅಸಮಾಧಾನ ವ್ಯಕ್ತಪಡಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಬಕಾರಿ ಇಲಾಖೆಯಲ್ಲಿ ಉಪ ಆಯುಕ್ತ ಮತ್ತು ಅಲ್ಲಿನ ಸಿಬ್ಬಂದಿಗಳ ನಡುವೆ ಸಮನ್ವಯತೆ ಇಲ್ಲದಿರುವುದರಿಂದ ತಹಬದಿಗೆ ತರಲು ಚಿಂತನೆ ನಡೆಸಿದ್ದೇನೆಂದರು. ಅಬಕಾರಿ ಆಯುಕ್ತರ ಆದೇಶದ ಪ್ರಕಾರ ಸನ್ನದು ಮಳಿಗೆ ಪರವಾನಗಿಯನ್ನು ನವೀಕರಣ ಮಾಡುವಾಗ ಅಧಿಕಾರಿಗಳು ನೀಲಿ ನಕ್ಷೆಯನ್ನು ನೀಡಬೇಕು, ಆದರೆ ನೀಲ ನಕ್ಷೆಯನ್ನು ನೀಡದೆ ಅಧಿಕಾರಿಗಳು ತಮ್ಮ ಬಳಿಯೇ ಇಟ್ಟುಕೊಂಡಿದ್ದರಿಂದ ಲೋಕಾಯುಕ್ತರು ಇತ್ತೀಚಿಗೆ ದಾಳಿ ನಡೆಸಬೇಕಾಯಿತು ಎಂದು ಹೇಳಿದರು. ಮಾ.1 ರಿಂದ ಬೀರ್ ಬೆಲೆ ಏರಿಕೆಯಾಗುತ್ತಿರುವುದರಿಂದ ಕೆಲವು ಅಂಗಡಿಗಳ ಮಾಲೀಕರು ಸರ್ಕಾರಕ್ಕೆ ತೆರಿಗೆ ಕಟ್ಟುವುದನ್ನು ತಪ್ಪಿಸಲು ಸರಕನ್ನು ದಾಸ್ತಾನು ಮಾಡುತ್ತಿರುವ ಬಗ್ಗೆ ತಮಗೆ ಮಾಹಿತಿ ಬಂದಿದೆ. ಹೆಚ್ಚಿನ ಬೆಲೆ ಈಗಾಗಲೇ ಎಷ್ಟು ಪ್ರಮಾಣದಲ್ಲಿ  ಬೀರ್ ಮಾರಾಟವಾಗಿದೆ ಎಂಬುದರ ಮಾಹಿತಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು,ಕಳೆದ ಜನವರಿ ಮಾಹಿತಿ ನೀಡಿದ್ದಾರೆಯೇ ಹೊರತು ಫೆಬ್ರವರಿ ತಿಂಗಳ ಮಾಹಿತಿ ಇನ್ನು ತಲುಪಿಸಿಲ್ಲವೆಂದು ಅಕ್ಷೇಪಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement