ಎಂಪಿಸಿಎಸ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಗುಡಿಬಂಡೆ: ತಾಲೂಕಿನ ವರ್ಲಕೊಂಡ, ಭತ್ತಲಹಳ್ಳಿ, ಗೆಗ್ಗಿಲರಾಳ್ಳಹಳ್ಳಿ, ಹಳೇಗುಡಿಬಂಡೆ ಗ್ರಾಮಗಳ ಹಾಲು ಉತ್ಪಾದಕರ ಸಂಘಗಳ ಆಡಳಿತ ಮಂಡಳಿ, ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು.ವರ್ಲಕೊಂಡ ಎಂಪಿಸಿಎಸ್ ಅಧ್ಯಕ್ಷರಾಗಿ ದೇವರಾಜು, ಉಪಾಧ್ಯಕ್ಷರಾಗಿ ಅಲ್ಲಾಬಕಾಷ್, ಭತ್ತಲಹಳ್ಳಿ ಎಂಪಿಸಿಎಸ್ ಅಧ್ಯಕ್ಷರಾಗಿ ಎಂ. ಚೆನ್ನಕೇಶವರೆಡ್ಡಿ, ಉಪಾಧ್ಯಕ್ಷರಾಗಿ ಮಮತಾಜ್, ಗೆಗ್ಗಿಲರಾಳ್ಳಹಳ್ಳಿ ಎಂಪಿಸಿಎಸ್ ಅಧ್ಯಕ್ಷರಾಗಿ ಪಿಳ್ಳವೆಂಕಟರಾಯಪ್ಪ, ಉಪಾಧ್ಯಕ್ಷರಾಗಿ ಶ್ರೀನಿವಾಸ, ಹಳೇ ಗುಡಿಬಂಡೆ ಎಂಪಿಸಿಎಸ್ ಅಧ್ಯಕ್ಷರಾಗಿ ಎಚ್.ವಿ. ವೆಂಕಟೇಶ, ಉಪಾಧ್ಯಕ್ಷರಾಗಿ ಜಹಂಗೀರ್ ಸಾಭ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.