ಕಡ್ಡಾಯ ಶಿಕ್ಷಣ ಯೋಜನೆ ಲೋಪ ಖಂಡಿಸಿ ಪ್ರತಿಭಟನೆ
ಮಾಲೂರು: ಕಡ್ಡಾಯ ಶಿಕ್ಷಣ ಯೋಜನೆಯ ಆಯ್ಕೆ ಪ್ರಕ್ರಿಯೆಯಲ್ಲಿ ಶಿಕ್ಷಣ ಇಲಾಖೆ ನಿರ್ಲಕ್ಷ್ಯದಿಂದ ಆಗುತ್ತಿರುವ ಲೋಪದೋಷಗಳನ್ನು ಖಂಡಿಸಿ ದಸಂಸ (ಪ್ರೊ.ಬಿ.ಕೆ. ಬಣ)ಕಾರ್ಯಕರ್ತರು ಇಲ್ಲಿನ ಶಿಕ್ಷಣಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಈ ಸಂದಂರ್ಭದಲ್ಲಿ ಮಾತನಾಡಿದ ಸಂಘಟನೆ ಸಂಚಾಲಕ ಎಸ್.ಎಂ. ವೆಂಕಟೇಶ್ ಮಾತನಾಡಿ, ಮಕ್ಕಳ ಉಚಿತ, ಕಡ್ಡಾಯ ಶಿಕ್ಷಣ ಕಾಯ್ದೆ ಅಡಿಯಲ್ಲಿ ಕೆಲವು ಶಾಲೆಗಳಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಸಿಗಬೇಕಾಗಿದ್ದ ದಾಖಲಾತಿಗಳು ಶಿಕ್ಷಣಾಧಿಕಾರಿಗಳ ಜಾಣ ಕುರುಡುತನದಿಂದ ಅರ್ಥಿಕವಾಗಿ ಸಬಲರಾಗಿರುವ ಕುಟುಂಬದ ಮಕ್ಕಳಿಗೆ ಸಿಗುತ್ತಿದೆ ಆರೋಪಿಸಿದರು. ಟೇಕಲ್ ಮುನಿರಾಜು, ವರದಾಪುರ ವೆಂಕಟೇಶ್, ಮೈಲಾಂಡ್ಹಳ್ಳಿ ಮುನಿರಾಜು,ದೊಡ್ಡಕಲ್ಲಹಳ್ಳಿ ನಾರಾಯಣಸ್ವಾಮಿ, ಮಡಿವಾಳ ರಾಮಚಂದ್ರ ಇದ್ದರು.