ಗ್ರಾಪಂ ಅವಿಶ್ವಾಸಕ್ಕೆ ಸೋಲು
ಟೇಕಲ್: ಮಾಲೂರು ತಾಲೂಕಿನಲ್ಲಿ ಭಾರಿ ಕುತೂಹಲ ಮೂಡಿಸಿದ ಟೇಕಲ್ ಗ್ರಾಪಂ ಅಧ್ಯಕ್ಷರ ಅವಿಶ್ವಾಸ ನಿರ್ಣಯ ಸಭೆ ಮಂಗಳವಾರ ನಡೆದು ಅವಿಶ್ವಾಸಕ್ಕೆ ಕೋಲಾರದ ಉಪವಿಭಾಗಾಧಿಕಾರಿಗಳಿಗೆ ಕೊಟ್ಟಿದ್ದ 10 ಸದಸ್ಯರು ಸಭೆಗೆ ಬಾರದೆ ಇದ್ದ ಕಾರಣ ಉಪವಿಭಾಗಾಧಿಕಾರಿ ಸಿ.ಎನ್. ಮಂಜುನಾಥರವರು ಸಭೆ ರದ್ದುಗೊಳಿಸಿದರು. ಇದರಿಂದ ಈಗಿರುವ ಅಧ್ಯಕ್ಷೆ ಮಂಜುಳಶಿವಣ್ಣ ಮುಂದುವರೆಯುವಂತೆ ಆಯಿತು.
ಕಳೆದ 10 ರಂದು ಕೋಲಾರದ ಉಪವಿಭಾಗಾಧಿಕಾರಿಗಳಿಗೆ 10 ಜನ ಸದಸ್ಯರು ಸಹಿ ಮಾಡಿದ ಅವಿಶ್ವಾಸ ಕೋರಿಕೆ ಪತ್ರವನ್ನು ನೀಡಲಾಗಿತ್ತು.
ಉಪವಿಭಾಗಾಧಿಕಾರಿಗಳು 25 ರಂದು ಅವಿಶ್ವಾಸ ನಿರ್ಣಯದ ಸಭೆ ಕರೆದಿದ್ದು 10 ಜನ ಸದಸ್ಯರು ಸಭೆಗೆ ಬಾರದೆ ಇದ್ದ ಕಾರಣ ಸಭೆ ರದ್ದು ಮಾಡಲಾಯಿತು.
ಒಳ ಒಪ್ಪಂದ: ತಾಪಂ ಮಾಜಿ ಅಧ್ಯಕ್ಷರೊಬ್ಬರ ಪತ್ನಿಯನ್ನು ಅಧ್ಯಕ್ಷ ಸ್ಥಾನಕ್ಕೆ ಕೂರಿಸಲು ಈ ರಾಜಕೀಯ ಮಾಡಲಾಗಿದೆ. ಆದರೆ ಅವಿಶ್ವಾಸ ನಿರ್ಣಯದ ಸಭೆಯಲ್ಲಿ ಅವರಿಗೆ ಮುಖಭಂಗ ಉಂಟಾಗಿದೆ.
ಅಭಿವೃದ್ಧಿ ಕಾಣದ ಗ್ರಾಪಂ: ಸುಮಾರು 2 ವರ್ಷಗಳಿಂದ ಟೇಕಲ್ ಗ್ರಾಪಂಗೆ ಸರಿಯಾದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಬಂದು ತೊಂದರೆ ನೀಡಲಾಗುತ್ತಿದೆ. ಗ್ರಾಪಂನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಎಲ್ಲಾ ಸದಸ್ಯರು ಮುಂದಾಗಬೇಕಾಗಿದೆ ಎಂದರು ಸ್ಥಳೀಯ ಸಾರ್ವಜನಿಕರ ಅಭಿಪ್ರಾಯವಾಗಿದೆ.