ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜಾತಿ ಪ್ರಮಾಣ ಪತ್ರ: ಪರ, ವಿರೋಧ ಪ್ರತಿಭಟನೆ

Rashmi Kasaragodu
Updated On : 26 Feb 2014, 1:32 am

ಮುಳಬಾಗಲು: ಎರಡು ದಲಿತ ಸಂಘಟನೆಗಳು  ಮಂಗಳವಾರ ಮಿನಿವಿಧಾನಸೌಧ ಎದುರು ಪ್ರತಿಭಟನೆ ನಡೆಸಿದ ಕಾರಣ ಸ್ವಲ್ಪ ಕಾಲ ಅತಂಕಕ್ಕೆ ಕಾರಣವಾಯಿತಾದರೂ ಪೊಲೀಸರ ಶ್ರಮದಿಂದ ಅಹಿತಕರ ಘಟನೆಗಳು ನಡೆಯಲಿಲ್ಲ.
ಮೊದಲಿಗೆ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಕೀಲುಹೊಳಲಿ ಸತೀಶ್ ನೇತೃತ್ವದಲ್ಲಿ ತಾಲೂಕು ಕಚೇರಿ ಬಳಿ ಆಗಮಿಸಿ ಹಾಲಿ ಶಾಸಕ ಕೊತ್ತೂರು ಮಂಜುನಾಥ್ಗೆ ಬುಡುಗ ಜಂಗಮ ಜಾತಿ ಪತ್ರ ನೀಡಿರುವ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಮುಳಬಾಗಲು ಇನ್ಸ್ಪೆಕ್ಟರ್ ತನಿಖಾಧಿಕಾರಿಯಾಗಿದ್ದು, ಈವರೆಗೂ 12 ಜನ ಸಾಕ್ಷಿದಾರರನ್ನು ವಿಚಾರಿಸಿ ಹೇಳಿಕೆ ಪಡೆದು ಸಾಕ್ಷಾದಾರಗಳನ್ನು ಸಂಗ್ರಹಿಸಿದ್ದಾರೆ. ಈ ಕುರಿತು ಶಿಘ್ರ ಕ್ರಮಕ್ಕೆ ಅವರು ಒತ್ತಾಯಿಸಿದರು. ಇವರೊಂದಿಗೆ ಕರ್ನಾಟಕ ದಲಿತ ಮತ್ತು ಹಿಂದುಳಿದ ರಕ್ಷಣಾ ಸಮಿತಿ ಮುಖಂಡ ವಿ.ಶ್ರೀನಾಥ್, ದೊಮ್ಮಸಂದ್ರ ನರಸಿಂಹ ಇದ್ದರು.
ಅದೇ ವೇಳೆ ದಲಿತ ಸಂಯುಕ್ತರಂಗದ ಸಂಘಟನೆಗಳ ಮುಖಂಡರು ಬುಡುಗ ಜಂಗಮ, ಚೆನ್ನದಾಸರ್ ಜಾತಿ ಪತ್ರಗಳನ್ನು ನೀಡಲು ಒತ್ತಾಯಿಸಿ ತಹಸೀಲ್ದಾರ್ ಅವರಿಗೆ ಮನಿವಿ ಮಾಡಿದರು. ಮುಖಂಡ ಗೊಲ್ಲಹಳ್ಳಿ ವೆಂಕಟೇಶ್, ಮೆಕಾನಿಕ್ ಶ್ರೀನಿವಾಸ್ ಇದ್ದರು. ತಹಸೀಲ್ದಾರ್ ಸೋಮಶೇಖರಯ್ಯ, ಮುಳಬಾಗಲು ಇನ್ಸ್ಪೆಕ್ಟರ್ ಕೃಷ್ಣಪ್ಪ ಸಬ್ ಇನ್ಸ್ಪೆಕ್ಟರ್ಗಳಾದ ಮೇಲ್ವನ್ ಪ್ರಾನ್ಸಿಸ್, ಕೆ. ಶ್ರೀಧರ್ ಮತ್ತು ಪೊಲೀಸ್ ಸಿಬ್ಬಂದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement