ದೇಗುಲಗಳಿಗೆ ಅನುದಾನಕ್ಕೆ ಮನವಿ
ಮುಳಬಾಗಲು: ತಾಲೂಕಿನ ಐತಿಹಾಸಿಕ ದೇವಾಲಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಶಾಸಕ ಕೊತ್ತೂರು ಜಿ. ಮಂಜುನಾಥ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಸೋಮವಾರ ಬೆಂಗಳೂರಿನಲ್ಲಿ ಮುಜರಾಯಿ ಇಲಾಖೆ ಅಯುಕ್ತೆ ಎಂ.ವಿ. ಸಾವಿತ್ರಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಶ್ರೀ ಆಂಜನೇಯಸ್ವಾಮಿ, ಕುರುಡುಮಲೆ ವಿನಾಯಕ ದೇವಾಲಯ, ಆವಣೆ ರಾಮಲಿಂಗೇಶ್ವರಸ್ವಾಮಿ, ವಿರೂಪಾಕ್ಷಿಯ ವಿರೂಪಾಕ್ಷೇಶ್ವರ, ಉತ್ತನೂರು ಗ್ರಾಮದ ವರದರಾಜಸ್ವಾಮಿ ದೇವಾಲಯ ಸೇರಿದಂತೆ ತಾಲೂಕಿನ ಹಲವಾರು ಪುರಾಣ ಪ್ರಸಿದ್ಧ ದೇವಾಲಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮಾಡುವಂತೆ ಕೋರಿದರು. ಮುಜರಾಯಿ ಇಲಾಖೆ ಆಯುಕ್ತೆ ಎಂ.ವಿ. ಸಾವಿತ್ರಿ ಮಾತನಾಡಿ, ಈಗಾಗಲೇ ತಾಲೂಕಿನ ಮುಜರಾಯಿ ಇಲಾಖೆಯ ವ್ಯಾಪ್ತಿಯ ದೇವಾಲಯಗಳಿಗಳ ಅಭಿವೃದ್ಧಿಗೆ 40 ಲಕ್ಷ ರುಪಾಯಿ ಬಿಡುಗಡೆ ಮಾಡಲಾಗಿದೆ. ಸ್ವಂತ ತಾಲೂಕಿನ ದೇವಾಲಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ತಿಳಿಸಿದರು. ಎಂ.ಸಿ. ನೀಲಕಂಠೇಗೌಡ, ಉಪಾಧ್ಯಕ್ಷ ಗಂಟ್ಲಪ್ಪ, ನಿರ್ದೇಶಕರಾದ ವೆಂಕಟರಾಮರೆಡ್ಡಿ, ಉತ್ತನೂರು ಶ್ರೀನಿವಾಸ್, ನಾರಾಯಣ್, ಶಂಕರಪ್ಪ, ಸೀನಪ್ಪ, ವೆಂಕಟರವಣಪ್ಪ ಇದ್ದರು.