ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನವ ನಿರ್ಮಾಣಕ್ಕೆ ಯುವಕರ ಪಾತ್ರ ಮಹತ್ವ

Rashmi Kasaragodu
Updated On : 26 Feb 2014, 1:32 am

ಕೋಲಾರ: ದೇಶ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಯುವಕರ ಪಾತ್ರ ಮಹತ್ತರವಾಗಿದ್ದು ಇದಕ್ಕಾಗಿ ಯುವಕರನ್ನು ಸಜ್ಜುಗೊಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
ಜಿಲ್ಲಾ ನೆಹರು ಯುವ ಕೇಂದ್ರ, ಜಿಲ್ಲಾಡಳಿತ ಹಾಗೂ ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ ನಗರದ ಸರ್ಕಾರಿ ಬಾಲಕರ ಕಾಲೇಜಿನ ಸರ್.ಎಂ.ವಿ. ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಜೀವ್ ಗಾಂಧಿ ಖೇಲ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಭಾರತದ ಜನ ಸಂಖ್ಯೆಯಲ್ಲಿ ಯುವಕರು ಶೇ.27ರಷ್ಟಿದ್ದಾರೆ, ಮುಂದಿನ ದಿನಗಳಲ್ಲಿ ಇದು ಶೇ.50 ರಷ್ಟಾಗಲಿದ್ದು ಜಗತ್ತಿನಲ್ಲಿ ಭಾರತವು ಯುವ ದೇಶವಾಗಿ ಹೊರ ಹೊಮ್ಮಲಿದ್ದು, ಪ್ರಸ್ತುತ ಮಾನವ ಯುವ ಸಂಪತ್ತಿನ ವಿಭಾಗದಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ ಎಂದರು.
ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಯು.ಟಿ.  ಖಾದರ್ ಮಾತನಾಡಿ, ರಾಷ್ಟ್ರೀಯ ಯುವ ನೀತಿ ಅನುಷ್ಠಾನ ಗೊಳಿಸುತ್ತಿರುವುದು ಸ್ವಾಗತಾರ್ಹ, ಭಾರತದ ಯುವಕರು ಕನಸುಗಳನ್ನು ನನಸು ಮಾಡಲಿ ಎಂಬುದು ಯು.ಪಿ.ಎ.ಸರ್ಕಾರದ ಸದಾಶಯವಾಗಿದೆ ಎಂದರು.
ಮುಂದಿನ ದಿನಗಳಲ್ಲಿ  ಭಾರತವನ್ನು ಮತ್ತಷ್ಟು ಬಲಗೊಳಿಸಲು ಯುವ ಜನಾಂಗವು ಕಂಕಣ ಬದ್ದವಾಗಿದ್ದರೆ ಮಾತ್ರ ಸಾಧ್ಯ, ಯುವ ನೀತಿಯನ್ನು ಸದ್ಬಳಿಸಿಕೊಂಡು ದೇಶವನ್ನು ಉನ್ನತ ಮಟ್ಟದಲ್ಲಿ  ಕೊಂಡೊಯ್ಯುವಂತೆ ಮಾಡಬೇಕು ಎಂದರು.
ವಿಜ್ಞಾನ ಮತ್ತು ತಂತ್ರಜ್ಞಾನ ಕೇವಲ ಶ್ರೀಮಂತರ ಸ್ವತ್ತಲ್ಲ ಕೇಂದ್ರ ಹಾಗೂ ರಾಜ್ಯ ಸರ್ಕಾರ ಇದನ್ನು ಬಡ ಜನತೆಗೂ ಅವಕಾಶ ಕಲ್ಪಿಸಿದೆ, ಅದನ್ನು ಸದ್ಬಳಿಸಿಕೊಂಡು ಭಾರತವನ್ನು  ಉನ್ನತ ಮಟ್ಟಕ್ಕೆ ತರಲು ಪ್ರಮಾಣಿಕತೆಯಿಂದ ಕಾರ್ಯ ನಿರ್ವಹಿಸುವಂತಾಗವಬೇಕೆಂದರು.
ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಡಿ.ಕೆ. ರವಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಗಣ್ಯರಿಂದ ಭಿತ್ತಿ ಪತ್ರ, ಕರಪತ್ರ, ಪುಸ್ತಕಗಳು ಬಿಡುಗಡೆಯಾದವು, ಯುವ ಪ್ರಶಸ್ತಿಗೆ ಪುರಸ್ಕೃತರಾದವರನ್ನು ಸನ್ಮಾನಿಸಿ ಬೆಕ್ ಹಾಗೂ ಅರ್ಹರಿಗೆ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಲಾಯಿತು.
ನಗರಸಭೆ ಸದಸ್ಯ ಪ್ರಸಾದ್ ಬಾಬು, ಮಾಜಿ ಅಧ್ಯಕ್ಷ ಅತ್ತಾವುಲ್ಲಾ, ಬುಸನಹಳ್ಳಿ ಅಂಜಿನಪ್ಪ, ಗೋವಿಂದಸ್ವಾಮಿ, ವಿ. ಕುಮಾರ್, ಜಯದೇವ, ವಿಜಯ ಕುಮಾರ್, ಕೋಳಿ ನಾರಾಯಣಸ್ವಾಮಿ, ಶ್ರೀನಿವಾಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement