ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬೆಸ್ಕಾಂ ಎಂಜಿನಿಯರ್ ಲೋಕಾ ಬಲೆಗೆ

Rashmi Kasaragodu
Updated On : 26 Feb 2014, 1:31 am

ಚಿಂತಾಮಣಿ: ವಿದ್ಯುತ್ ಸಂಪರ್ಕ ಕಲ್ಪಿಸಲು ಗುತ್ತಿಗೆದಾರನಿಂದ ಲಂಚಸ್ವೀಕರಿಸಲು ಯತ್ನಿಸಿದ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಿ. ನಾರಾಯಣಸ್ವಾಮಿ ಲೋಕಾಯುಕ್ತರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ತಾಲೂಕಿನ ಚಿನ್ನಸಂದ್ರ ಗ್ರಾಪಂ ವ್ಯಾಪ್ತಿಯ ಕೆಂದನಹಳ್ಳಿ ಗ್ರಾಮದ ಮಹಿಳೆ ಶಾಂತಮ್ಮ ತಮ್ಮ ಬೋರ್ ವೆಲ್ಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕೋರಿ ನಗರದ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿಯಲ್ಲಿ ಅರ್ಜಿ ಹಾಕಿದ್ದರು ಎನ್ನಲಾಗಿದೆ.
ಕಡತಕ್ಕೆ ಸಹಿ ಹಾಕಲು 3,000 ರು. ಲಂಚಕ್ಕೆ ಬೇಡಿಕೆ ಇಟ್ಟಾಗ ಮೊದಲ ಕಂತಾಗಿ 2,500 ರು.ಗಳು ನೀಡಲಾಗಿದೆ. ಉಳಿದ 500 ರು.ಗಳ ಹಣಕ್ಕಾಗಿ ಪದೇ ಪದೇ ಪೀಡಿಸುತ್ತಿದ ಕಾರಣಕ್ಕಾಗಿ ಚಿಕ್ಕಬಳ್ಳಾಪುರ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದು, ಮಂಗಳವಾರ ಸಂಜೆ 4.30 ಗಂಟೆಯಲ್ಲಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ರಸ್ತೆ ಬದಿಯ ಗ್ರಾಮೀಣ ಉಪವಿಭಾಗ ಸಹಾಯಕ ಕಾರ್ಯಪಾಲಕ ಕಚೇರಿಯಲ್ಲಿ 500 ರು.ಗಳು ಸುಧಾಕರ್ ನೀಡುತ್ತಿರುವಾಗ ಬೆಸ್ಕಾಂ ಅಧಿಕಾರಿ ಸಿ.ನಾರಾಯಣಸ್ವಾಮಿ ಲೋಕಾಯುಕ್ತರ ಬಲೆಗೆ ಸಿಕ್ಕಿದ್ದಾನೆ.
ಈ ಸಂಬಂಧ ಚಿಕ್ಕಬಳ್ಳಾಪುರ ಲೋಕಾಯುಕ್ತ ಡಿವೈಎಸ್ಪಿ ಬೋಪಯ್ಯ ಹಲವು ಕಡತಗಳನ್ನು ವಶಕ್ಕೆ ಪಡೆದು ಆರೋಪಿ ಸಿ. ನಾರಾಯಣಸ್ವಾಮಿರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement