'ಸಂಸ್ಕಾರಯುತ ಶಿಕ್ಷಣ ನೀಡಿ'
ಮಾಲೂರು: ಮಕ್ಕಳಲ್ಲಿ ಸಂಸ್ಕಾರಯುತ ಶಿಕ್ಷಣ ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದ ಸ್ವಾಮೀಜಿ ಹೇಳಿದರು.
ತಾಲೂಕಿನ ಚಿಕ್ಕತಿರುಪತಿಯ ಎಸ್ಎಲ್ವಿ ವಿದ್ಯಾಲಯದ 25 ನೇ ವರ್ಷದ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಮಕ್ಕಳಲ್ಲಿ ಪಠ್ಯ ಪುಸ್ತಕದ ಜತೆಯಲ್ಲಿ ಪೋಷಕರನ್ನು-ಗುರು ಹಿರಿಯರನ್ನು ಗೌರವಿಸುವ ಸಂಸ್ಕಾರ ಬೆಳೆಯಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ಭಾಗದ ಮಕ್ಕಳು ಹೆಚ್ಚು ವಿದ್ಯಾವಂತರಾಗುವ ಕಡೆ ಗಮನ ಹರಿಸಬೇಕು ಎಂದರು.
ಶಾಸಕ ಮಂಜುನಾಥ್ಗೌಡ ಮಾತನಾಡಿ, ವಿದ್ಯೆ ಯಾರೊಬ್ಬರ ಸ್ವತ್ತಲ್ಲ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ, ಜಿಪಂ ಮಾಜಿ ಅಧ್ಯಕ್ಷೆ ಮಂಜುಳಾ ವೆಂಕಟೇಶ್ ಮಾತನಾಡಿದರು. ಇದೇ ಸಂಧರ್ಭಧಲ್ಲಿ ಶಾಲಾ ಮಂಡಳಿಯವರು ಮಂಗಳಾನಂದ ಸ್ವಾಮೀಜಿ ಹಾಗೂ ಶಾಸಕ ಮಂಜುನಾಥ್ ಗೌಡರನ್ನು ಸನ್ಮಾನಿಸಲಾಯಿತು. ತಾಪಂ ಸದಸ್ಯೆ ಮಂಗಳಾ ರಮೇಶ್, ಚಿಕ್ಕತಿರುಪತಿ ಪಂಚಾಯ್ತಿ ಅಧ್ಯಕ್ಷೆ ಶೈಲಜಾ ಬಾಲಕೃಷ್ಣ, ಗಾಯಕ ಶಶಿಧರ್ ಕೋಟೆ, ಸಂಸ್ಥೆಯ ಅಧ್ಯಕ್ಷೆ ಶಾಂತ ಅಶ್ವಥ್ನಾರಾಯಣ್ಗೌಡ, ಅಬ್ಬಯ್ಯ, ಅಶ್ವಥ್ನಾರಾಯಮ್ಗೌಡ ಇದ್ದರು.
ಮಹಾ ಶಿವರಾತ್ರಿ ಜಾಗರಣೆಗೆ ಸಿದ್ಧತೆ
ಶಿಡ್ಲಘಟ್ಟ: ಮಹಾ ಶಿವರಾತ್ರಿ ಪ್ರಯುಕ್ತ ಸಮೀಪದ ಶ್ರೀ ಸಾಯಿನಾಥ ಜ್ಞಾನ ಮಂದಿರದಲ್ಲಿ ಬರದ ಸಿದ್ಧತೆ ಮಾಡಲಾಗಿದೆ. ಮಹಾ ಶಿವರಾತ್ರಿ ಜಾಗರಣೆ ಪ್ರಯುಕ್ತ ಜಲ ಕಂಠೇಶ್ವರನಿಗೆ ಅಲಂಕಾರ, ಸುಪ್ರಸಿದ್ಧ ಕಲಾವಿದರಿಂದ ಶ್ವೇತ ಕುಮಾರ ಚರಿತ್ರೆ ಯಕ್ಷಗಾನ ಏರ್ಪಡಿಸಲಾಗಿದೆ. ಪಟ್ಟಣದ ಶ್ರೀ ನಗರೇಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಭ್ರಹ್ಮ ಕುಮಾರಿ ವಿಶ್ವವಿದ್ಯಾನಿಲಯದಿಂದ ಪೂಜಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.
ಪಂಚ ಲಿಂಗ ದರ್ಶನ: ಜಿಲ್ಲೆಯಲ್ಲಿ ಅಪರೂಪವಾದ ಪಂಚಲಿಂಗ ದರ್ಶನ ಕೋಟೆ ಸೋಮೆಶ್ವರ, ಪೇಟೆ ನಗರೇಶ್ವರ, ಕಾಶಿ ವಿಶ್ವನಾಥ, ಏಕಾಂಬರೇಶ್ವರ ಹಾಗೂ ಗವಿ ಗಂಗಾದರೇಶ್ವರ ಪಂಚ ಲಿಂಗ ದರ್ಶನವನ್ನು ಶಿವರಾತ್ರಿಯಂದು ದರ್ಶನ ಏರ್ಪಡಿಸಲಾಗಿದೆ.
ಹೆಚ್ಚು ಅಂಕ: ರು. 5 ಸಾವಿರ ಪುರಸ್ಕಾರ
ಕೋಲಾರ: ಕಳೆದ ಏಪ್ರಿಲ್-2013ರ ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕಗಳಿಸಿದ ಕೋಲಾರ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳಿಗೆ ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ತಲಾ 5 ಸಾವಿರ ರು. ಬಹುಮಾನ ವಿತರಿಸಿದರು. ಬಿಜಾಪುರದ ಎಂ.ಬಿ. ಪಾಟೀಲ್ ವಿದ್ಯಾಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋಲಾರ ತಾಲೂಕಿನ ಸೂಲೂರು ಸರ್ಕಾರಿ ಪ್ರೌಢಶಾಲೆಯ ನವೀನ್, ಮುಳಬಾಗಿಲಿನ ಮೊರಾರ್ಜಿ ದೇಸಾಯಿ ಪ್ರೌಢಶಾಲೆಯ ಸರಿತಾ ಇವರಿಗೆ ತಲಾ 5 ಸಾವಿರ ರು.ಗಳ ಬಹುಮಾನ ನೀಡಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮದ್ ಮೊಹಿಸೀನ್, ಕೋಲಾರ ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕ ಬಿ.ಬಿ. ಬಾಬು ಜನಾರ್ದನನಾಯ್ಡು ಇದ್ದರು.
ಸಚಿವ ಆಂಜನೇಯರನ್ನು
ಸಂಪುಟದಿಂದ ಕೈಬಿಡಿ
ಮಾಲೂರು: ಪರಿಶಿಷ್ಟ ಜಾತಿಗೆ ಸುಮಾರು ಎಂಟು ಜಾತಿಗಳನ್ನು ಹೊಸದಾಗಿ ಸೇರ್ಪೆಡೆ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಯರವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಅಗ್ರಹಿಸಿ ಕರ್ನಾಟಕ ದಲಿತ ಸಿಂಹ ಸೇನೆ ಕಾರ್ಯಕರ್ತರು ಇಲ್ಲಿನ ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಸಂಘಟನೆ ತಾಲೂಕು ಸಂಚಾಲಕ ತಿಪ್ಪಸಂದ್ರ ಶ್ರೀನಿವಾಸ್, ಸಂವಿಧಾನ ಬರೆದಿರುವ ಡಾ.ಬಿ.ಆರ್.ಅಂಬೇಡ್ಕರ್ ಆಶಯಕ್ಕೆ ತಿಲಾಂಜಲಿ ನೀಡುವಂತೆ ಮೀಸಲಾತಿಯಲ್ಲಿರುವ ಜಾತಿಗಳಿಗೆ ಅನ್ಯಾಯ ಮಾಡಲು ಹೊರಟಿರುವ ಸಚಿವ ಆಂಜನೇಯರವರು ಇದೇ ಸಂವಿಧಾನದಲ್ಲಿರುವ ಮೀಸಲಾತಿ ಅಡಿಯಲ್ಲಿ ಸಚಿವರಾಗಿರುವುದು ವಿಪರ್ಯಾಸ ಎಂದರು.
ಅರ್ಜಿ ಆಹ್ವಾನ
ಶಿಡ್ಲಘಟ್ಟ: ಅಂಗವಾಡಿ ಸಹಾಯಕಿಯರ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಪಟ್ಟಣದ ಶಿಶು ಅಬಿವೃದ್ಧಿ ಯೋಜನಾಧಿಕಾರಿಗಳ ಕಚೆರಿಯನ್ನು ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ. ಗಂಬೀರ್ನಹಳ್ಳಿ(ಸಾಮಾನ್ಯ ವರ್ಗ) ಹಾರಡಿ(ಸಾಮಾನ್ಯ) ಕೋಟಗಲ್(ಸಾಮಾನ್ಯ) ಇರಗಪ್ಪನಹಳ್ಳಿ(ಸಾಮಾನ್ಯ)ಯರ್ರನಾಗೇನಹಳ್ಳಿ(ಸಾಮಾನ್ಯ)ಅಮ್ಮಗಾರನ ಹಳ್ಳಿ(ಸಾಮಾನ್ಯ) ಇದ್ಲೂಡು(ಸಾಮಾನ್ಯ) ಗಂಜಿ ಗುಂಟೆ-1(ಸಾಮಾನ್ಯ) ಕೊತ್ತನೂರು(ಸಾಮಾನ್ಯ) ಪಿಂಡಪಾಪನ ಹಳ್ಳಿ(ಸಾಮಾನ್ಯ) ಕನ್ನಮಂಗಲ(ಪರಿಶಿಷ್ಟ ಜಾತಿ) ಚಿಂತಡಪಿ(ಸಾಮಾನ್ಯ), ಕುಂದಲ ಗುರ್ಕಿ-1(ಸಾಮಾನ್ಯ) ಚೀಮಂಗಲ-1(ಸಾಮಾನ್ಯ) ಅರಿಕೆರೆ(ಸಾಮಾನ್ಯ) ಅತ್ತಿಗಾನ ಹಳ್ಳಿ(ಸಾಮಾನ್ಯ) ಆಮೂರು ತಮ್ಮನಹಳ್ಳಿ(ಪರಿಶಿಷ್ಟ ಜಾತಿ) ಭಕ್ತರ ಹಳ್ಳಿ-2(ಪರಿಶಿಷ್ಟ ಜಾತಿ) ಶೀಗೇನ ಹಳ್ಳಿ(ಸಾಮಾನ್ಯ) ಹನುಮಂತಪುರ(ಸಾಮಾನ್ಯ) ಮುಸ್ಲಿಂ ಕಾಲೂನಿ(ಸಾಮಾನ್ಯ) ಕನಕ ಪುರ(ಸಾಮಾನ್ಯ) ಮುತ್ತೂರು-2(ಪರಿಶಿಷ್ಟ ಜಾತಿ) ರಾಜೀವ್ ಗಾಂಧಿ ಬಡಾವಣೆ(ಸಾಮಾನ್ಯ) ಚೀಮನ ಹಳ್ಳಿ(ಸಾಮಾನ್ಯ) ಎ. ಹುಣಿಸೇನ ಹಳ್ಳಿ(ಪರಿಶಿಷ್ಟ ಪಂಗಡ) ಎನ್. ಹೊಸಹಳ್ಳಿ(ಸಾಮಾನ್ಯ) ಮಳ್ಳೂರು-2(ಪರಿಶಿಷ್ಟ ಜಾತಿ) ಬಾಳೇಗೌಡನ ಹಳ್ಳಿ(ಪರಿಶಿಷ್ಟ ಪಂಗಡ) ಮಾರಗಾನ ಪರ್ತಿ (ಸಾಮಾನ್ಯ) ತುರುಕಾಚನ ಹಳ್ಳಿ(ಪರಿಶಿಷ್ಟ ಜಾತಿ)ಗಳಲ್ಲಿ ಅಂಗವಾಡಿ ಸಹಾಯಕಿಯರ ಹುದ್ದೆಗಳು ಖಾಲಿ ಇದ್ದು ಮಾ.17 ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ.