ಆಸ್ತಿಗಿಂತಲೂ ಆರೋಗ್ಯ ಮುಖ್ಯ
ಬಂಗಾರಪೇಟೆ: ಮನುಷ್ಯನಿಗೆ ಆಸ್ತಿಗಿಂತಲೂ ಆರೋಗ್ಯ ಮುಖ್ಯವಾಗಿದ್ದು, ಪ್ರತಿಯೊಬ್ಬರು ಆರೋಗ್ಯದತ್ತ ನಿಗಾವಹಿಸಬೇಕೆಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ವೈದ್ಯ ಡಾ. ನರೇಂದ್ರ ಹೇಳಿದರು.
ಪಟ್ಟಣದ ಅಯ್ಯಪ್ಪಸ್ವಾಮಿ ದೇವಾಲಯದ ಮಿನಿ ಹಾಲ್ನಲ್ಲಿ ಯೋಗಿ ನಾರೇಯಣ ಬಲಿಜ ಯುವಕರ ಸಂಘ ಮತ್ತು ಮಣಿಪಾಲ್ ಆಸ್ಪತ್ರೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಆಧುನಿಕ ಯುಗದಲ್ಲಿ ಪ್ರತಿಯೊಬ್ಬರೂ ಆರೋಗ್ಯ ಕಡೆಗಣಿಸುತ್ತಾ ಹಣ ಸಂಪಾದಿಸುವಲ್ಲಿ ಪೈಪೋಟಿಗೆ ಇಳಿದಿದ್ದಾರೆ. ಇದರಿಂದ ಮನುಷ್ಯನ ಆರೋಗ್ಯ ಹದಗೆಡಲು ಕಾರಣವಾಗಿದೆ ಎಂದರು.
ನಿಯಮಾನುಸಾರ ಆಹಾರ ಸೇವನೆ ಹಾಗೂ ಪ್ರತಿದಿನ ಅರ್ಧ ಗಂಟೆ ವ್ಯಾಯಾಮ ಮಾಡುವುದರಿಂದ ಖಾಯಿಲೆಗಳು ದೂರ ಸರಿಯುತವೆ. ಶಿಸ್ತು ಬದ್ಧ ಜೀವನ ಮಾಡದೆ ನಿರ್ಲಕ್ಷ್ಯ ಮಾಡಿದರೆ ತೊಂದರೆ ಕಟ್ಟಿಟ್ಟ ಬುತ್ತಿ ಎಂದರು.
ಇಂದಿನ ಶಿಬಿರದಲ್ಲಿ ಹೃದ್ರೋಗ, ನರರೋಗ, ಸಕ್ಕರೆ ಕಾಯಿಲೆ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಸಂಬಂಧಪಟ್ಟ ಸುಮಾರು 450ಕ್ಕೂ ಹೆಚ್ಚು ಮಂದಿ ರೋಗಿಗಳು ತಪಾಸಣೆ ಮಾಡಿಸಿಕೊಂಡರು. ಈ ವೇಲೆ ಬಲಿಜ ಸಂಘದ ಜ್ಞಾನಕುಮಾರ್, ಕಿಶೋರ್, ರಾಜಕುಮಾರ್, ಸಂದೀಪ್, ರಾಜೇಂದ್ರ ಮತ್ತು ಮಂಜುನಾಥ್ ಇದ್ದರು.