ಇಂದು ಭಕ್ತಿ ಸಂಗೀತ
ಚಿಕ್ಕಬಳ್ಳಾಪುರ: ಶಿವರಾತ್ರಿ ಜಾಗರಣೆ ಪ್ರಯುಕ್ತ ತಾಲೂಕಿನ ಮುಷ್ಟೂರಿನಲ್ಲಿರುವ ಚೌಡೇಶ್ವರಿ ದೇವಾಲಯದಲ್ಲಿ ಫೆ.27ರಂದು ಸಂಜೆ 7 ಗಂಟೆಗೆ ಭಕ್ತಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚೌಡೇಶ್ವರಿ ಅಮ್ಮನವರ ದೇವಾಲಯದ ಅಭಿವೃದ್ಧಿ ಟ್ರಸ್ಟ್ ಆಯೋಜಿಸಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ತಾಪಂ ಅಧ್ಯಕ್ಷ ಕೆ.ಕೃಷ್ಣಮೂರ್ತಿ ನೆರವೇರಿಸಲಿದ್ದಾರೆ.
ತಾಪಂ ಸದಸ್ಯೆ ಸುಶೀಲಮ್ಮ ಶಿವಣ್ಣ, ತಿಪ್ಪೇನಹಳ್ಳಿ ಗ್ರಾಪಂ ಅಧ್ಯಕ್ಷೆ ನಾರಾಯಣಮ್ಮ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.