ಕುಡಿವ ನೀರಿಗೆ ಬರ: ಪೊಲೀಸ್ ಠಾಣೆಗೆ ನೀರೆಯರ ಮುತ್ತಿಗೆ
ಗೌರಿಬಿದನೂರು: ತಾಲೂಕಿನ ಬಿಸಲಹಳ್ಳಿ ಗ್ರಾಮದಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಉಲ್ಬಣಗೊಂಡಿದ್ದು. ವಿದ್ಯುತ್ ಸಮಸ್ಯೆಯಿಂದ ಗ್ರಾಮಕ್ಕೆ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಗ್ರಾಮಸ್ಥರು ಹಾಗೂ ಬಿಲ್‌ಕಲಕ್ಟರ್ ನಡುವೆ ಮಾತಿನ ಚಕಮಕಿಯಲ್ಲಿ ಬಿಲ್ ಬುಕ್ ಹರಿದು ಹೋಗಿದ್ದರಿಂದ ಸಮೀಪದ ಜೆ.ಇ. ಪೊಲೀಸ್ ಠಾಣೆಗೆ ನ್ಯಾಯ ಕೇಳಿದ ಮಹಿಳೆಯರನ್ನು ಆರೋಪಿಗಳನ್ನಾಗಿಸಿ ದೂರು ನೀಡಿದ್ದರಿಂದ ಗ್ರಾಮದ 45ಕ್ಕೂ ಹೆಚು ಮಹಿಳೆಯರು ತಮ್ಮೆಲ್ಲರನ್ನು ಬಂಧಿಸುವಂತೆ ಠಾಣೆ ಬಳಿ ಜಮಾಯಿಸಿ ಒತ್ತಾಯಿಸಿದ್ದಾರೆ. ಗ್ರಾಮದ ಮಹಿಳೆಯರಾದ ಸುಧಾ, ಸುಶೀಲಮ್, ಶಂಕರಮ್ಮ, ಲಕ್ಷಮ್ಮ, ಪುಟ್ಟಮ್ಮ, ಹಾಗೂ ಅಶ್ಥಪ್ಪ, ಕೃಷ್ಣಪ್ಪ, ನರಸಿಂಹ ಮೂರ್ತಿ ಮುಂತಾದವರು ಠಾಣೆ ಬಳಿ ಬಂದು ಎಲ್ಲರನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.