ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೆಜಿಎಫ್: ಶಿವರಾತ್ರಿ ಪ್ರಯುಕ್ತ ಶಿವಲಿಂಗ ದರ್ಶನ

Rashmi Kasaragodu
Updated On : 27 Feb 2014, 1:43 am

ಕೆಜಿಎಫ್: ಮಹಾಶಿವರಾತ್ರಿ ಪ್ರಯುಕ್ತ ಆರ್ಯ ವೈಶ್ಯ ಮಂಡಳಿ ವತಿಯಿಂದ ಒಂದು ಲಕ್ಷ ಶಿವಲಿಂಗ ದರ್ಶನ ಹಾಗೂ ಮಹಾರುದ್ರ ಹೋಮ ಮಹೋತ್ಸವವನ್ನು ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಆರ್ಯ ವೈಶ್ಯ ಮಂಡಳಿ  ಸೇರಿದಂತೆ ಕೋಲಾರ ಜಿಲ್ಲೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ತಮಿಳುನಾಡು ಹಾಗೂ ಆಂಧ್ರಪ್ರದೇಶ ಮೂಲದ ನೂರು ಶಿವ ಭಕ್ತರು ಜೇಡುಮಣ್ಣಿನಲ್ಲಿ ಸ್ವತಃ ತಮ್ಮ ಕೈಗಳಿಂದ ತಯಾರಿಸಲಾದ ಒಂದು ಲಕ್ಷ ಶಿವಲಿಂಗಗಳನ್ನು ಶಿವರಾತ್ರಿ ಪ್ರಯುಕ್ತ ಭಕ್ತರು ಹಾಗೂ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದೆ ಎಂದು ತಿಳಿಸಿದರು. ಶುಕ್ರವಾರ ವಾಸವಿ ಕಲ್ಯಾಣ ಮಂಟಪದ ಕನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಬೆಳಗ್ಗೆ 9 ಗಂಟೆಗೆ ಮಹಾ ರುದ್ರಹೋಮ ಹಮ್ಮಿಕೊಂಡಿದ್ದು, ಕಾರ್ಯಕ್ರಮಕ್ಕೆ ಉಡುಪಿ ಪೇಜಾವರ ಮಠಾಧೀಶ ವಿಶ್ವೇಶ್ವರತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಮಹಾಪೂರ್ಣಾಹುತಿ, ಆಶೀರ್ವಚನ, ಅನುಗ್ರಹ ಭಾಷಣ, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಆರ್ಯ ವೈಶ್ಯ ಮಂಡಲಿ ಮಹಿಳಾಧ್ಯಕ್ಷೆ ಲಕ್ಷ್ಮೀಬಾಯ್, ಉಪಾಧ್ಯಕ್ಷೆ ಉಮಾ ರಮೇಶ್, ಪ್ರಮೀಳಾ ಸುರೇಶ್, ಕಾರ್ಯದರ್ಶಿಗಳಾದ ವಾಣಿ ಶ್ರೀಧರ್, ಮುಖಂಡರಾದ ಗುಪ್ತಾ, ರಮೇಶ್, ಜಿ.ಎಸ್.ಕಾರ್ತಿಕ್ ಸೇರಿದಂತೆ ಇತರೆ ಮುಖಂಡರು ಕಾರ್ಯಕರ್ತರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement