ಕೋಟಿಲಿಂಗದಲ್ಲಿ ಶಿವರಾತ್ರಿ ವಿಶೇಷ
ಬಂಗಾರಪೇಟೆ: ಕೋಟಿಲಿಂಗದಲ್ಲಿ ಮಹಾಶಿವರಾತ್ರಿ ಆಚರಣೆಗೆ ಸಿದ್ದವಾಗಿದ್ದು. ಇಲ್ಲಿರುವ 108 ಅಡಿ ಎತ್ತರದ ಶಿವಲಿಂಗ ವಿಶ್ವದಲ್ಲೆ ಅತೀ ಎತ್ತರದ ಶಿವಲಿಂಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಇಲ್ಲಿ ಸಹಸ್ರಾರ ಶಿವಲಿಂಗಗಳ ಸಂಗ್ರಹವಿರುವುದರಿಂದ ಕೋಟಿ ಲಿಂಗೇಶ್ವರ ಎಂಬುದು ಅನ್ವರ್ಥನಾಮ.ಶಿವಲಿಂಗದ ಎದುರು 32ಅಡಿ ಎತ್ತರದ ಬಸವಣ್ಣ (ನಂದಿ)ಪ್ರಮುಖ ಆಕರ್ಷಣೆ. ಪಟ್ಟಣದಿಂದ ಕೇವಲ 14ಕಿ.ಮೀ ದೂರದಲ್ಲಿರುವ ಕೋಟಿಲಿಂಗ 1974ರಲ್ಲಿ ಕಮ್ಮಸಂದ್ರ ಸಾಂಬ ಶಿವಮೂರ್ತಿ ಸ್ವಾಮಿಗಳ ಮಾರ್ಗದರ್ಶದಲ್ಲಿ ಸ್ಥಾಪನೆಗೊಂಡ ನಂತರ ಇಲ್ಲಿಗೆ ಬರುವ ಅಸಂಖ್ಯಾತ ಯಾತ್ರಾರ್ಥಿಗಳು, ಭಕ್ತಾಧಿಗಳಿಂದ ಪ್ರತಿಷ್ಠಾಪಿತವಾಗುತ್ತಿರುವ ಲಿಂಗಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಸಾಗಿದೆ. ಗುರುವಾರ ಶಿವರಾತ್ರಿ ಆಚರಣೆಗೆ ದೇವಾಲಯದ ಆಡಳಿತ ಮಂಡಳಿ ಸಕಲ ಸಿದ್ದತೆ ಕೈಗೊಂಡಿದೆ.