ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಖಾಸಗಿ ವಲಯದಲ್ಲಿ ಮೀಸಲಾತಿಗೆ ಒತ್ತಾಯ

Rashmi Kasaragodu
Updated On : 27 Feb 2014, 1:42 am

ಕೋಲಾರ: ಖಾಸಗಿ ವಲಯದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಯಂಗ್ ಇಂಡಿಯನ್ ಇಂಟಿಗ್ರೇಟೆಡ್ ವೆಲ್‌ಫೇರ್ ಫೌಂಡೇಷನ್ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯ ರೆವಿನ್ಯೂ ಹೆಡ್ ಮುನ್ಷಿ ಕೃಷ್ಣೇಗೌಡ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಬುದ್ಧಿವಂತರೆಂದು ಸ್ಮರಣಶಕ್ತಿ ಹೆಚ್ಚು ಇರುವವರನ್ನೇ ಆಯ್ಕೆ ಮಾಡುವ ಮುನ್ನ ಮಾನವೀಯತೆ ದೃಷ್ಟಿಯಿಂದ ಕೆಲಸದ ಅಗತ್ಯ ಇರುವವರಿಗೆ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಸಂಘಟನೆ ಮುಖ್ಯಸ್ಥ ವಕೀಲ ನರೇಂದ್ರಬಾಬು ಒತ್ತಾಯಿಸಿದರು.
ಪ್ರತಿ ವಿದ್ಯಾರ್ಥಿ ನೆನಪಿನ ಶಕ್ತಿಯೂ ತೀರಾ ವಿಭಿನ್ನವಾಗಿರುತ್ತದೆ. ಕಲಿಕೆಯಲ್ಲಿ ತೀರಾ ಮುಂದಿದ್ದರೂ ಜ್ಞಾಪಕ ಶಕ್ತಿಯಲ್ಲಿ ತೀರಾ ಕಡಿಮೆ ಇರಬಹುದು. ಕಲಿಕೆಯ ಜೊತೆಗೆ ವಿದ್ಯಾರ್ಥಿಯಲ್ಲಿ ಅವನದ್ದೇ ಆದ ವೈಚಿತ್ರತೆ ಇರಬಹುದು. ವಿಶೇಷ ಗ್ರಹಿಕೆ, ಪರಿಣಿತಿ, ತಾರ್ಕಿಕತೆ, ಪ್ರಬುದ್ಧತೆ ಇರಬಹುದು. ಆದರೆ ಇವೆಲ್ಲವನ್ನೂ ಬಿಟ್ಟು ಕಂಠಪಾಠ ಮಾಡಿದ್ದನ್ನು ಯಥಾವತ್ತಾಗಿ ಬರೆಯುವುದನ್ನೇ ಬುದ್ಧಿವಂತಿಕೆ, ಇವರೇ ಬುದ್ಧಿವಂತರು ಎಂದು ಸರಾಸಗಟಾಗಿ ಪರಿಗಣಿಸುವುದು ಅವೈಜ್ಞಾನಿಕ ಎಂದು ಅಭಿಪ್ರಾಯಿಸಿದ್ದಾರೆ. ಹೀಗಾಗಿ ಇಂತಹ ಬುದ್ಧಿವಂತಿಕೆಗೆ ಆಧ್ಯತೆ ಕೊಡುತ್ತಿರುವಾಗ ಸಾಮಾಜಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವಲ್ಲಿ ಯಾವುದೇ ಅಭಾಸವಾಗುವುದಿಲ್ಲ. ಆದ್ದರಿಂದ ಖಾಸಗಿ ವಲಯದಲ್ಲಿಯೂ ಮೀಸಲಾತಿಯನ್ನು ಕಲ್ಪಿಸುವುದು ಸಾಮಾಜಿಕ ನ್ಯಾಯವಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಎನ್. ನವೀನ್ ಕುಮಾರ್, ಉಪಾಧ್ಯಕ್ಷ ಎನ್. ಹರಿಕೃಷ್ಣ, ಅಲ್ಪಸಂಖ್ಯಾತರ ವಿಭಾಗದ ಅಲ್ಲಾಬಕಾಶ್, ಜಾಫರ್, ಆತಿಕ್ ಅಹ್ಮದ್, ವಿನೋದ್.ಕೆ. ಮ್ಯಾಥ್ಯೂ, ಹಿಂದುಳಿದ ವರ್ಗಗಳ ವಿಭಾಗದ ರಾಜೇಶ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement