ನಮೋ ಟೀ ಸ್ಟಾಲ್ಗೆ ಚಾಲನೆ
ಚಿಂತಾಮಣಿ: ನರೇಂದ್ರ ಮೋದಿ ಗುಜರಾತ್ನಂತೆಯೇ ದೇಶವನ್ನು ಮಾದರಿ ದೇಶವನ್ನಾಗಿ ಮಾಡುವುದು ಖಚಿತವೆಂದು ಕೋಲಾರ ಡಿಸಿಸಿ ಬ್ಯಾಂಕ್ ನಿರ್ದೇಶಕ ಸತ್ಯನಾರಾಯಣ ಮಹೇಶ್ ಹೇಳಿದರು.
ನಗರದ ಮಾರುತಿ ಸರ್ಕಲ್ ಬಳಿ ಬಿಜೆಪಿ ಘಟಕ ವತಿಯಿಂದ ಹಮ್ಮಿಕೊಂಡಿದ್ದ ನಮೋ ಟೀ ಸ್ಟಾಲ್ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಚಹಾ ನೀಡುವ ಮೂಲಕ ಉದ್ಘಾಟಿಸಿದರು. ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ಘೋಷಿಸಿದ ದಿನದಿಂದ ಹಿಡಿದು ಇಲ್ಲಿಯತನಕ ಮೋದಿಯನ್ನು ರಾಜಕೀಯವಾಗಿ ತುಳಿಯಲು ವಿರೋಧ ಪಕ್ಷಗಳು ಮಾಧ್ಯಮಗಳಲ್ಲಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿವೆ. ಆದರೂ ಜನ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ನೀಡಲಿದ್ದು, ಮೋದಿ ಪ್ರಧಾನಮಂತ್ರಿಯಾಗುವುದು ಖಚಿತವೆಂದು ನುಡಿದರು.
ದೇಶವು ಕೆಲವೇ ವರ್ಷಗಳಲ್ಲಿ ಪ್ರಪಂಚಕ್ಕೆ ಗುಜರಾತ್ನಂತೆ ದೇಶವೂ ಸಹ ಅಭಿವೃದ್ಧಿಯಲ್ಲಿ ಮಾದರಿ ದೇಶವಾಗಲಿದೆ ಎಂದು ಹೇಳಿದರು. ಈ ವೇಳೆ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಪ್ರದೀಪ್, ನವೀನ್, ಮಾಜಿ ಅಧ್ಯಕ್ಷ ನಾ.ಶಂಕರ್, ಜಿಲ್ಲಾ ಕಾರ್ಯದರ್ಶಿ ಗೋವಿಂದರಾಜು, ಚಿಂತಾಮಣೀ ಯುವಮೋರ್ಚಾ ಅಧ್ಯಕ್ಷ ವಿ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಶ್ರೀ ವಿನೋದ್, ನಗರದ ಯುವಮೋರ್ಚಾ ಅಧ್ಯಕ್ಷ ಉಮೇಶ್, ಜಿಲ್ಲಾ ಉಪಾಧ್ಯಕ್ಷ ತಾಯಪ್ಪ, ಮುಖಂಡರಾದ ವೆಂಕಟೇಶ್, ಶ್ರೀರಾಮರೆಡ್ಡಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.