ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರಸ್ತೆ ಅಪಘಾತ: ನಾಲ್ವರು ಶಿಕ್ಷಕರು ಸಾವು

Rashmi Kasaragodu
Updated On : 27 Feb 2014, 1:41 am

ಬಂಗಾರಪೇಟೆ: ರಸ್ತೆ ಅಪಘಾತದಲ್ಲಿ ನಾಲ್ವರು ಶಿಕ್ಷಕ ಸಂಘದ ಮುಖಂಡರು ಮೃತಪಟ್ಟು ಮತ್ತೊಬ್ಬ ಶಿಕ್ಷಕ ಪಾರಾಗಿರುವ ಘಟನೆ ಕಳೆದ ಮಧ್ಯ ರಾತ್ರಿ ಸಂಭವಿಸಿದೆ.
ಶಿಕ್ಷಕರಾದ ಸಿ.ಚಂದ್ರಶೇಖಗೌಡ (50), ಅಪ್ಪಾಜಿಗೌಡ(45), ಸಿದ್ದಪ್ಪ (50) ಹಾಗೂ ಮೋಹನ್ ಕುಮಾರ್ ಅಪಘಾತದಲ್ಲಿ ಅಸುನೀಗಿದವರು.
ಮಾ.1ರಂದು ಬೇತಮಂಗದಲ್ಲಿ ಶಿಕ್ಷಕರ ಸಮಾವೇಶ ಏರ್ಪಡಿಸಿದ್ದರಿಂದ ಅಂದಿನ ಸಮಾರಂಭಕ್ಕೆ ಅಗತ್ಯ ವಸ್ತು ಖರೀದಿಸಲು ಐವರು ಶಿಕ್ಷಕರು, ಗಾಯಾಳು ನಟರಾಜ್ ನ್ಯಾನೋ ಕಾರಿನಲ್ಲಿ ಬೆಂಗಳೂರಿಗೆ ಹೋಗಿ ರಾತ್ರಿ ವಾಪಸ್ ಬರುವಾಗ ಕೋಲಾರ ಬಂಗಾರಪೇಟೆ ನಡುವೆ ಬರುವ ಅನಿಗಾನಹಳ್ಳಿ ಗೇಟ್ ಬಳಿ ಎದುರಿನಿಂದ ಮತ್ತೊಂದು ವಾಹನ ಬಂದ ಕಾರಣ, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ
ದೊಡ್ಡ ಕಲ್ಲಿಗೆ ಡಿಕ್ಕಿ ಹೊಡೆದಿದ್ದಾರೆ ನಂತರ ಕಾರು ಮೂರು ಪಲ್ಟಿ ಹೊಡೆದಿದೆ ಕಾರ್ ಡಿಕ್ಕಿ ಹೊಡೆದ ರಭಸಕ್ಕೆ ಕಾರ್ ಸಂಪೂರ್ಣ ನಜ್ಜುಗುಜ್ಜಾಗಿ ನಾಲ್ವರು ಸ್ಥಳದಲ್ಲೇ
ಮೃತಪಟ್ಟಿದ್ದಾರೆ. ಕಾರಿನ ಮಾಲೀಕ ನಟರಾಜ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಂತಿಮ ದರ್ಶನ: ಶಾಸಕರಾದ ವರ್ತೂರು ಪ್ರಕಾಶ್, ಎಸ್.ಎನ್.ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾಜಿ ಶಾಸಕರಾದ ಎಂ,ನಾರಾಯಣಸ್ವಾಮಿ, ಬಿ.ಪಿ.ವೆಂಕಟಮುನಿಯಪ್ಪ, ಡಿಡಿಪಿಐ ಪದ್ಮನಾಭ್, ಬಿಇಒ ಕೆ.ಜಯರಾಜ್, ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಕನ್ನಡ ಸಂಘದ ಅಧ್ಯಕ್ಷ ಪಲ್ಲವಿಮಣಿ ಮತ್ತಿತರರು ಅಂತಿಮ ದರ್ಶನ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement