ಕನ್ನಡ ಸಾಹಿತ್ಯದ ಕಂಪು ಹರಡಿದ ವೆಂಕಟೇಶಮೂರ್ತಿ
ಬಂಗಾರಪೇಟೆ: ಪಟ್ಟಣದ ಬಸ್ ನಿಲ್ದಾಣದಲ್ಲಿ ಕಳೆದ ಎರಡು ದಿನಗಳಿಂದ ಕನ್ನಡ ಪ್ರೇಮಿ ಯುವಕನೊಬ್ಬ ಕನ್ನಡ ಸಾಹಿತ್ಯದ ಕಂಪು ಹರಡಿಸುತ್ತಿದ್ದ. ಹಳದಿ ಬಣ್ಣದ ಅಂಗಿ, ಕೆಂಪು ಬಣ್ಣದ ಷರಾಯಿ ಧರಿಸಿದ್ದ ವ್ಯಕ್ತಿ ಹಾಸ್ಯ ಚಟಾಕಿ ಹಾರಿಸಿ ಮಕ್ಕಳನ್ನು ತನ್ನತ್ತ ಸೆಳೆಯುತ್ತಿದ್ದ. ಅಲ್ಲಿ ಹಾಸ್ಯ ಕಲಾವಿದ ಬೆಂಗಳೂರಿನ ಬಸವನಗುಡಿಯ ಆರ್. ವೆಂಕಟೇಶಮೂರ್ತಿ ಕನ್ನಡದ ಕೆಲ ನುಡಿಮುತ್ತುಗಳ ಮೂಲಕ ಜನರನ್ನು ಸೆಳೆಯುತ್ತಿದ್ದರು. ದೊಡ್ಡ ಕವಿ ಎಂಬ ಬಿರುದು ಪಡೆದ ಇವರು ತನ್ನ ಬಿಳಿ ಬಣ್ಣದ ದ್ವಿಚಕ್ರ ವಾಹನದ ಮೇಲೆ ಕನ್ನಡದ ವರ್ಣ ಮಾಲೆ, ನುಡಿ ಮುತ್ತುಗಳನ್ನು ಬಿತ್ತರಿಸಿದ್ದಾರೆ. ಅಲ್ಲದೆ ವ್ಯಾಸ, ರನ್ನ, ಕನಕದಾಸ ಹೀಗೆ ಹಲವು ಕವಿಗಳ ಭಾವಚಿತ್ರಗಳನ್ನು ಸಿಕ್ಕಿಸಿಕೊಂಡಿದ್ದ ಅವರ ಉಡುಗೆ, ತಲೆಗೆ ಧರಿಸಿದ್ದ ರುಮಾಲು, ವಾಹನಕ್ಕೆ ಸಿಕ್ಕಿಸಿದ್ದ ಭಾವುಟದಲ್ಲಿ ಕನ್ನಡ ಕಂಪು ಮೆರೆದಿತ್ತು.