ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಗ್ರಂಥಾಲಯಗಳು ಜ್ಞಾನ ದೇಗುಲಗಳು'

Rashmi Kasaragodu
Updated On : 28 Feb 2014, 1:34 am

ಚಿಂತಾಮಣಿ: ಗ್ರಂಥಾಲಯಗಳು ಮತ್ತು ಪ್ರಯೋಗಾಲಯಗಳು ಜ್ಞಾನ ದೇಗುಲಗಳಿದ್ದತೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಜಿಲ್ಲಾ ಉಪನಿರ್ದೇಶಕ ಸಿ.ಬಿ. ಹನುಮಂತಪ್ಪ ಅಭಿಪ್ರಾಯ ಪಟ್ಟರು.
ನಗರದ ಮಾಳಪ್ಪಲ್ಲಿ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಗ್ರಂಥಾಲಯ ಮತ್ತು ಪ್ರಯೋಗಾಲಯದ ಉದ್ಘಾಟನೆ, ದಾನಿಗಳಿಗೆ ಅಭಿನಂದನೆ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನವೃದ್ಧಿಗೆ ಗ್ರಂಥಾಲಯಗಳು ಪೂರಕವಾದರೆ ಹೊಸ ಅವಿಷ್ಕಾರಗಳಿಗೆ ಪ್ರಯೋಗಾಲಯಗಳು ಸಹಕಾರಿಯಾಗಿವೆ ಎಂದರು.
ನಂತರ ಸರ್ಕಾರಿ ಸಾರ್ವಜನಿಕರ ಅಸ್ಪತ್ರೆಯ ವೈದ್ಯಾಧಿಕಾರಿ ಡಾ. ಜಯಂತಿ ಮಾತನಾಡಿ, ತಾನು ಇದೇ ಶಾಲೆಯಲ್ಲಿ ವ್ಯಾಸಾಂಗ ಮಾಡಿದ್ದು, ಈ ಶಾಲೆಯ ಬಗ್ಗೆ ಅಪಾರ ಗೌರವವಿರುವುದಾಗಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕ ಕೆ.ಜಿ.ಶ್ರೀರಾಮ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲೆಗೆ ನೆರವು ನೀಡಿದ ದಾನಿಗಳಾದ ಡಾ. ಜಯಂತಿ, ಎಂಜಿನಿಯರ್ ನಾರಾಯಣಸ್ವಾಮಿ, ನಿವೃತ್ತ ಉಪ ಪ್ರಾಂಶುಪಾಲ ಎಸ್.ಎನ್. ಸುಧಾಕರ್, ನಿವೃತ್ತ ಉಪನ್ಯಾಸಕ ಬಿ. ಸೋಮಶೇಖರಯ್ಯ, ಆರ್. ಚೌಡಪ್ಪರನ್ನು ಅಭಿನಂದಿಸಿ ನೆನಪಿನ ಕಾಣಿಕೆ ನೀಡಿ ಸತ್ಕರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement