ಗ್ರಾಮೀಣ ಸಮಸ್ಯೆಗಳ ಬಗ್ಗೆ ಕಾರ್ಯಕ್ರಮ
ಗುಡಿಬಂಡೆ: ತಾಲೂಕಿನ ಹಂಪಸಂದ್ರ ಗ್ರಾಪಂ ವ್ಯಾಪ್ತಿಯ ಕೋರೇನಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಸಂಚಾಲಕ ನಾರಾಯಣ ಸ್ವಾಮಿ ಪ್ರಾಸ್ಥಾವಿಕವಾಗಿ ಮಾತನಾಡಿ, ಸಂಘಟನೆ ತಾಲೂಕಿನಲ್ಲಿ ಸುಮಾರು 20 ವರ್ಷಗಳಿಂದ ಜೀತದಾಳುಗಳು, ಕೃಷಿ ಕಾರ್ಮಿಕರು ಮತ್ತು ಮಹಿಳೆಯರ ಯೋಗ ಕ್ಷೇಮಕ್ಕಾಗಿ ದುಡಿಯುತ್ತಿದೆ. ತಾಲೂಕಿನಲ್ಲಿ ಈತನಕ 286 ಮಂದಿ ಜೀತದಾಳುಗಳನ್ನು ಗುರ್ತ್ತಿಸಲಾಗಿದ್ದು, ಇವರೆಲ್ಲರಿಗೂ ಸರ್ಕಾರದಿಂದ ಪುನರ್ವಸತಿ ಕಲ್ಪಿಸಲು ಶ್ರಮಿಸಲಾಗುತ್ತಿದೆ ಎಂದರು. ತಾಲೂಕು ಸಮಾಜ ಕಲ್ಯಾಣಾಧಿಕಾರಿ ಅಬ್ದುಲ್ ನಜೀರ್ ಸಾಬ್ ಮಾತನಾಡಿ, ಗ್ರಾಪಂ ಅಧಿಕಾರಿಗಳು ಗ್ರಾಮಕ್ಕೆ ಅವಶ್ಯವಿರುವ ರಸ್ತೆ, ಚರಂಡಿ, ಮುಂತಾದುವನ್ನು ಸಮರ್ಪಕವಾಗಿ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳ ಜೊತೆ ಚರ್ಚಿಸುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ರಮೇಶ್, ಕೃಷಿ ಇಲಾಖೆ ಗಂಗಪ್ಪ, ಅಂಗನ ವಾಡಿ ಮೇಲ್ವಿಚಾರಕಿ ಪದ್ಮಾವತಮ್ಮ, ಚಂದ್ರಶೇಖರ್, ರಾಮಾಂಜನೇಯ, ಸುಜಾತ, ಅಶ್ವತ್ತಪ್ಪ, ನಾರಾಯಣ ಸ್ವಾಮಿ ಇದ್ದರು.