ಚಿಂತಾಮಣಿಯಲ್ಲಿ ಶಿವರಾತ್ರಿ...
ಚಿಂತಾಮಣಿ: ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ತಾಲೂಕಿನ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯಿತು.
ತಾಲೂಕಿನ ಮುರುಗಮಲೆ ಪ್ರಸಿದ್ಧ ಮುಕ್ತೀಶ್ವರ ಬೆಟ್ಟ, ಕೈವಾರ ಭೀಮಲಿಂಗೇಶ್ವರ, ಅಂಬಾಜಿದುರ್ಗದ ಕೈಲಾಸಗಿರಿ, ಉಪ್ಪರಪೇಟೆಯ ಪುರಾತನ ಈಶ್ವರ ದೇವಾಲಯ, ಕಾಡುಮಲ್ಲೇಶ್ವರ ಬೆಟ್ಟ, ನಗರದ ಪ್ರಸಿದ್ಧ ಶ್ರೀ ನಾಗನಾಥೇಶ್ವರ ದೇವಾಲಯ, ಅಗ್ರಹಾರದ ಸೋಮೇಶ್ವ ದೇವಾಲಯ, ಜೋಡಿರಸ್ತೆಯ ಶ್ರೀ ಸಹನೇಶ್ವರ ಸ್ವಾಮಿ ದೇವಾಲಯ, ಆಜಾದ್ ಚೌಕಿನ ಶ್ರೀ ಹರಿಹರೇಶ್ವರಸ್ವಾಮಿ ದೇವಾಲಯ, ನಾರಸಿಂಹಪೇಟೆಯ ಶ್ರೀ ವೀರಾಂಜನೇಯಸ್ವಾಮಿ ಮತ್ತು ಪಾರ್ವತಿ ಸಮೇತ ಸುಂದರೇಶ್ವರಸ್ವಾಮಿರವರಿಗೆ ಮಹಾ ಶಿವರಾತ್ರಿ ಪ್ರಯುಕ್ತ ಸಹಸ್ರ ನಾಮ ಅಷ್ಟೋತ್ತರ ಶತಲಿಂಗ ದರ್ಶನ,ಬಹ್ಮಕುಮಾರೀಸ್ ಈಶ್ವರಿಯ ಮಹಾದಾನಿ ಭವನದಲ್ಲಿ ಬೃಹತ್ ಶಿವಲಿಂಗ ದರ್ಶನ ನಡೆದವು. ಭಕ್ತಾಧಿಗಳು ಬೆಳಗಿನಿಂದಲೇ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.