ಪಂಚ ಲಿಂಗ ದರ್ಶನ
ಶಿಡ್ಲಘಟ್ಟ: ಪಟ್ಟನದಲ್ಲಿ ಮಹಾಶಿವರಾತ್ರಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಂಜಾನೆಯಿಂದಲೇ ಭಕ್ತರು ಶಿವದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಇಲ್ಲಿನ ಕೋಟೆ ಸೋಮೆಶ್ವರ, ಪೇಟೆ ನಗರೇಶ್ವರ, ಕಾಶಿ ವಿಶ್ವನಾಥ, ಮತ್ತು ಏಕಾಂಬರೇಶ್ವರ ಹಾಗೂ ವೀರಾಪುರದ ಗವಿ ಗಂಗಾದರೇಶ್ವರ ದೇವಾಲಯಗಳಿಗೆ ಭೇಟಿ ನೀಡಿ ಪಂಚ ಲಿಂಗ ದರ್ಶನ ಪಡೆದರು. ಪುರಾತನವಾದ ಈ ಐದು ದೇವಾಲಯಗಳನ್ನು ಶಿವರಾತ್ರಿಯಂದು ದರ್ಶನ ಪಡೆದಲ್ಲಿ ಮೋಕ್ಷ ಪ್ರಾಪ್ತಿ ಎಂಬ ಪ್ರತೀತಿ ಆಚರಣೆಯಲ್ಲಿದ್ದು ಪಟ್ಟಣ ಮತ್ತು ತಾಲೂಕಿನಾದ್ಯಂತ ಶಿವಭಕ್ತರು ಸಾವಿರಾರು ಸಂಖ್ಯೆಯಲ್ಲಿ ಪಂಚ ಲಿಂಗ ದರ್ಶನ ಪಡೆದರು. ಸಮೀಪದ ಸಾಯಿನಾಥ ಜ್ಞಾನ ಮಂದಿರದಲ್ಲಿ ಮುಂಜಾನೆ ರುದ್ರಹೋಮ, ಮತ್ತು ಜಲ ಕಂಠೇಶ್ವರನಿಗೆ ಭಕ್ತರಿಂದಲೇ ಲಿಂಗಕ್ಕೆ ಕ್ಷೀರಾಬಿಷೇಕ ಮಾಡಲಾಯಿತು. ಸಾವಿರಾರು ಭಕ್ತರು ಜಲ ಕಂಠೇಶ್ವರ ಮತ್ತು ಸಾಯಿನಾಥ ದರ್ಶನ ಪಡೆದರು. ಮಹಾ ಶಿವರಾತ್ರಿ ಜಾಗರಣೆ ಪ್ರಯುಕ್ತ ಇದೇ ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕಲಾ ತಂಡದಿಂದ ಶ್ವೇತ ಕುಮಾರ ಚರಿತ್ರೆ ಪೌರಾಣಿಕ ಯಕ್ಷಗಾನ ಏರ್ಪಡಿಸಲಾಗಿತ್ತು.