ಮಾಲೂರಲ್ಲಿ ವಿದ್ಯಾರ್ಥಿ ಕಾಣೆ
ಮಾಲೂರು: ಕಾಲೇಜಿಗೆ ಹೋದ ವಿದ್ಯಾರ್ಥಿಯೊಬ್ಬ ಕಾಣೆಯಾಗಿದ್ದಾನೆ ಎಂದು ಪೋಷಕರು ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಪಟ್ಟಣದ ಮಾರುತಿ ಬಡಾವಣೆಯ ವೆಂಕಟೇಶ್ ಎಂಬುವರ ಪುತ್ರ ವಿ. ಚೇತನ್ ಕಳೆದ ನವಂಬರ್ನಿಂದ ಕಾಣೆಯಾಗಿರುವ ಹುಡುಗ. ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಅರೇನಾ ಅನಿಮೇಶನ್ ತರಗತಿಗೆ ಹೋಗುತ್ತಿದ್ದ 19 ವರ್ಷದ ಚೇತನ್ ಕಳೆದ ನವಂಬರ್ 9 ರಂದು ಬೆಂಗಳೂರಿಗೆ ಹೋದವನು ಮತ್ತೇ ವಾಪ್ಪಾಸ್ ಬಂದಿಲ್ಲ. ಅತನ ಮೊಬೈಲ್ ಸ್ವಿಚ್ ಅಫ್ ಆಗಿದೆ. ಕನ್ನಡ, ಇಂಗ್ಲಿಷ್, ತೆಲುಗು ಮಾತನಾಡುವ ಚೇತನ್ ಮೈ ಬಣ ಬಿಳಿಯಾಗಿದ್ದು, ಹೋಗುವಾಗ ಬ್ಲೂ ಜೀನ್ಸ್ ಪ್ಯಾಂಟ್, ಗ್ರೀನ್ ಚೆಕ್ಸ್ ಶರ್ಟ್ ಧರಿಸಿದ್ದ ಎನ್ನಲಾಗಿದೆ. ಈತ ಕಂಡು ಬಂದಲ್ಲಿ ತಂದೆ ವೆಂಕಟೇಶ್(8453616385)ಅಥವಾ ಸ್ಥಳೀಯ ಪೊಲೀಸ್ಠಾಣೆಗೆ ತಿಳಿಸುವಂತೆ ಮವಿ ಮಾಡಿದ್ದಾರೆ.